ನವದೆಹಲಿ: ಪಹಲ್ಗಾಮ್ ನಲ್ಲಿ ಉಗ್ರ ದಾಳಿಯ ಬಳಿಕ ಪಾಕಿಸ್ತಾನದ ಒಂದೊಂದೇ ರೆಕ್ಕೆ ಮುರಿಯುತ್ತಿರುವ ಭಾರತ ಈಗ ನೀರಿನ ಬಳಿಕ ಔಷಧಿ ಸಿಗದಂತೆ ಮಾಡಿ ಮರ್ಮಾಘಾತ ನೀಡಿದೆ.
ಜಮ್ಮು ಕಾಶ್ಮೀರದಲ್ಲಿರನ್ನು ಛೂ ಬಿಡಲು ಪಾಕಿಸ್ತಾನವೇ ಕಾರಣ ಎನ್ನುವುದು ಇಡೀ ವಿಶ್ವಕ್ಕೇ ಗೊತ್ತಿರುವ ಸಂಗತಿ. ತನ್ನ ದೇಶದಲ್ಲಿ ಉಗ್ರರನ್ನು ಸಾಕಿ ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಛೂ ಬಿಡುತ್ತಿರುವ ಪಾಕಿಸ್ತಾನಕ್ಕೆ ಭಾರತ ರಾಜತಾಂತ್ರಿಕ ಮಾರ್ಗದಲ್ಲಿಯೇ ಪೆಟ್ಟು ನೀಡುತ್ತಿದೆ.
ಸಿಂಧೂ ನದಿ ಒಪ್ಪಂದ ಮುರಿಯುವ ಮೂಲಕ ನೀರು ಸಿಗದಂತೆ ಮಾಡಿದೆ. ಅಟ್ಟಾರಿ-ವಾಘಾ ಗಡಿ ಮುಚ್ಚುವ ಮೂಲಕ ಎರಡೂ ದೇಶಗಳ ನಡುವಿನ ಸಂಪರ್ಕ ಬಂದ್ ಮಾಡಿದೆ. ಭಾರತದಲ್ಲಿರುವ ಪಾಕಿಸ್ತಾನಿ ಪ್ರಜೆಗಳ ವೀಸಾ ರದ್ದುಗೊಳಿಸಿ ನಾಗರಿಕರನ್ನು ಗಡೀಪಾರು ಮಾಡಿದೆ.
ಇದರ ಬೆನ್ನಲ್ಲೇ ಪಾಕಿಸ್ತಾನ ಕೂಡಾ ಭಾರತದೊಂದಿಗೆ ಎಲ್ಲಾ ವ್ಯಾಪಾರ ವಹಿವಾಟಿಗೂ ನಿರ್ಬಂಧ ವಿಧಿಸಿತ್ತು. ಆದರೆ ಇದರ ಪರಿಣಾಮ ಆ ದೇಶಕ್ಕೇ ತಟ್ಟುತ್ತಿದೆ. ಪಾಕಿಸ್ತಾನಕ್ಕೆ ಈಗ ಬೇಕಾದ ಔಷಧಿಯೂ ಪೂರೈಕೆಯಾಗುತ್ತಿಲ್ಲ. ಇದರಿಂದಾಗಿ ಔಷಧ ಪೂರೈಕೆಗೆ ಪರ್ಯಾಯ ಮಾರ್ಗ ಹುಡುಕುವಂತಾಗಿದೆ. ರೇಬಿಸ್ ತಡೆ, ಲಸಿಕೆಗಳು, ವಿಷ ವಿರೋಧಿ, ಕ್ಯಾನರ್ ಔಷಧಿಗಳು ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳು ಭಾರತದಿಂದ ಪೂರೈಕೆಯಾಗುತ್ತಿತ್ತು. ಆದರೆ ಈಗ ವ್ಯಾಪಾರ ವಾಣಿಜ್ಯ ವಹಿವಾಟು ಬಂದ್ ಮಾಡಿರುವುದರಿಂದ ಇದೆಲ್ಲದಕ್ಕೂ ತಡೆಯಾಗಿದೆ.