ಹಾಸನಾಂಬಾ ದೇವಾಲಯವನ್ನು ವಕ್ಫ್ ಬೋರ್ಡ್ ಗೆ ಕೊಟ್ಟು ಬಿಟ್ಟೀರಾ ಮತ್ತೆ: ಸಿದ್ದರಾಮಯ್ಯಗೆ ಕ್ಲಾಸ್

Krishnaveni K

ಮಂಗಳವಾರ, 29 ಅಕ್ಟೋಬರ್ 2024 (10:09 IST)
ಹಾಸನ: ವಿಜಯಪುರದಲ್ಲಿ ವಕ್ಫ್ ಬೋರ್ಡ್ ನೋಟಿಸ್ ವಿಚಾರ ಭಾರೀ ಸದ್ದು ಮಾಡುತ್ತಿರುವ ಬೆನ್ನಲ್ಲೇ ಈಗ ಸಿಎಂ ಸಿದ್ದರಾಮಯ್ಯ ಹಾಸನಾಂಬ ಭೇಟಿ ಬಗ್ಗೆಯೂ ನೆಟ್ಟಿಗರೊಬ್ಬರು ಟ್ರೋಲ್ ಮಾಡಿದ್ದಾರೆ.

ವರ್ಷಕ್ಕೊಮ್ಮೆ ತೆರೆಯುವ ಹಾಸನಾಂಬ ದೇವಾಲಯ ಇದೀಗ ಭಕ್ತರಿಗಾಗಿ ತೆರೆಯಲಾಗಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಜನ ಬಂದು ದೇವಿಯ ದರ್ಶನ ಪಡೆದು ಹೋಗುತ್ತಿದ್ದಾರೆ. ನಿನ್ನೆ ಸಂಜೆ ಸಿಎಂ ಸಿದ್ದರಾಮಯ್ಯ ಕೂಡಾ ಹಾಸನಾಂಬೆಯ ದರ್ಶನ ಮಾಡಲು ಬಂದಿದ್ದಾರೆ.

ಈ ಕ್ಷಣವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಾಸನಾಂಬ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದೆ. ಪ್ರತೀ ವರ್ಷವೂ ಇದೇ ರೀತಿ ಮಳೆಯಾಗಿ ನಾಡಿನಲ್ಲಿ ಸುಭಿಕ್ಷೆ ತುಂಬಿರಲಿ ಎಂದು ದೇವಿಯನ್ನು ಬೇಡಿಕೊಂಡೆ ಎಂದು ಸಿದ್ದರಾಮಯ್ಯ ಬರೆದುಕೊಂಡಿದ್ದಾರೆ.

ಜೊತೆಗೆ ಈ ಸಂದರ್ಭದಲ್ಲಿ ಹಾಸನಾಂಬ ದೇವಾಲಯ ಸುತ್ತ ಅಳವಡಿಸಿರುವ ವಿಶೇಷ ದೀಪಾಲಂಕಾರವನ್ನು ವೀಕ್ಷಿಸಿದ ಕ್ಷಣವನ್ನೂ ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದು, ಹಾಸನಾಂಬ ದೇವಾಲಯವನ್ನೂ ವಕ್ಫ್ ಬೋರ್ಡ್ ಗೆ ಕೊಟ್ಟು ಬಿಟ್ಟೀರ ಮತ್ತೆ ಎಂದು ಕಾಲೆಳೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ