ಬರ್ತ್ ಡೇ ದಿನ ಕಾವೇರಿಗೆ ಎಂಟ್ರಿ ಕೊಟ್ಟ ಸಿಎಂ ಯಡಿಯೂರಪ್ಪ

ಗುರುವಾರ, 27 ಫೆಬ್ರವರಿ 2020 (15:30 IST)
ತಮ್ಮ ಜನುಮದಿನದಂದೇ ಕಾವೇರಿ ನಿವಾಸಕ್ಕೆ ತಮ್ಮ ವಾಸ್ತವ್ಯವನ್ನು ಸಿಎಂ ಬದಲಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 78ನೇ ಜನ್ಮದಿನದ ಶುಭ ದಿನದಂದೇ ತಮ್ಮ ವಾಸ್ತವ್ಯವನ್ನು ಅಧಿಕೃತವಾಗಿ ಕಾವೇರಿಗೆ ಬದಲಾವಣೆ ಮಾಡಿದ್ದಾರೆ.

ಪೂಜೆ, ವಿಶೇಷ ಹೋಮ, ಹವನ ಸೇರಿದಂತೆ ಧಾರ್ಮಿಕ ಹಾಗೂ ಪೂಜಾ ವಿಧಿ ವಿಧಾನಗಳು ಕಾವೇರಿಯಲ್ಲಿ ಬೆಳಗ್ಗೆಯೇ ನಡೆದವು.

ಸಚಿವ ಸಂಪುಟದ ಸದಸ್ಯರು, ಶಾಸಕರು ಹಾಗೂ ಪಕ್ಷದ ಮುಖಂಡರೊಂದಿಗೆ ಸಿಎಂ ಕಾವೇರಿ ನಿವಾಸದಲ್ಲೇ ಉಪಹಾರ ಸೇವನೆ ಮಾಡಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ