ಬೆಂಗಳೂರು: ರಾಜ್ಯದಲ್ಲಿ ದಿನನಿತ್ಯ ಒಂದಲ್ಲ ಒಂದು ಕಡೆ ನಡೆಯುತ್ತಿರುವ ಕೋಮುಗಲಭೆಗಳನ್ನ ನೋಡುತ್ತಿದ್ದರೆ ಕೋಮುಗಲಭೆಗಳು ಕಾಂಗ್ರೆಸ್
ಸರ್ಕಾರದ ಆರನೇ ಗ್ಯಾರೆಂಟಿ ಅನ್ನಿಸುತ್ತಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ನಿನ್ನೆ ರಾತ್ರಿ ದಾವಣಗೆರೆಯಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟದ ಬಗ್ಗೆ ಅವರು ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅವರು ಫೋಸ್ಟ್ ಹಾಕಿದ್ದಾರೆ.
ಗೃಹ ಸಚಿವ ಡಾ.ಜಿಪರಮೇಶ್ವರ್ ಅವರೇ, ದಾವಣಗೆರೆಯಲ್ಲಿ ಗಣೇಶ ವಿಸರ್ಜನೆ ವೇಳೆ ಪೊಲೀಸರಿಗೆ ಬಿದ್ದಿರುವ ಕಲ್ಲೇಟು, 30 ವಾಹನಗಳು ಜಖಂ ಆಗಿರುವುದು, ಮನೆಗಳ ಕಿಟಿಕಿ ಗಾಜುಗಳು ಪುಡಿ ಪುಡಿ ಆಗಿರುವುದು ಇವೆಲ್ಲ ನಿಮ್ಮ ಪ್ರಕಾರ ಸಣ್ಣ, ಆಕಸ್ಮಿಕ ಘಟನೆಗಳೇ ಅಲ್ಲವೇ? ಅಥವಾ ಇದು ಸುಳ್ಳು ಸುದ್ದಿ ಎಂದು ಮಾಧ್ಯಮಗಳ ಮೇಲೆ ಎಫ್ಐಆರ್ ಹಾಕುತ್ತೀರಾ?
ಸಿಎಂ ಸಿದ್ದರಾಮಯ್ಯನವರೇ, ಪರಮೇಶ್ವರ್ ಅವರ ಬಾಲಿಶತನ, ಬೇಜವಾಬ್ದಾರಿತನದಿಂದ ರಾಜ್ಯದ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ, ರಾಜ್ಯದಲ್ಲಿ ದಿನನಿತ್ಯ ಶಾಂತಿ ಕಡದುತ್ತಿದೆ. ಪರಮೇಶ್ವರ್ ಅವರ ರಾಜೀನಾಮೆ ಪಡೆದು ಯಾರಾದರೂ ಸಮರ್ಥರಿಗೆ ಗೃಹ ಇಲಾಖೆ ವಹಿಸಿ ಪುಣ್ಯ ಕಟ್ಟಿಕೊಳ್ಳಿ.