ಆಪರೇಷನ್ ಕಮಲ ಆಡಿಯೋ ಟೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೀಕರ್ ರಮೇಶ್ ಕುಮಾರ್, ನನ್ನ ಸದ್ಯದ ಸ್ಥಿತಿ ರೇಪ್‍ಗೆ ಒಳಗಾದವರ ಪರಿಸ್ಥಿತಿಯಂತಿದೆ. ರೇಪ್ ಆದ ವ್ಯಕ್ತಿಗೆ ಕೋರ್ಟ್ ನಲ್ಲಿ ಹೋದರೆ ಎಲ್ಲಿ ಆಯ್ತು? ಹೇಗಾಯ್ತು ಎಂದು ಪದೇ ಪದೇ ಕೇಳುತ್ತಾರೆ. ಅದೇ ರೀತಿ ನೀವೆಲ್ಲಾ ನನ್ನ ರೇಪ್ ಮಾಡುತ್ತಿದ್ದೀರಿ ಎಂದು ತಮ್ಮ ನೋವನ್ನು ಹೇಳಿಕೊಂಡಿದ್ದರು.
ಅವರ ಈ ಮಾತಿಗೆ ಸಾಕಷ್ಟು ಮಂದಿ ವಿರೋಧ ವ್ಯಕ್ತಪಡಿಸುತ್ತಿದ್ದು, ರೇಪ್‍ಗೆ ಒಳಗಾದವರ ಮನಸ್ಥಿತಿಯನ್ನು ತಮ್ಮ ಸಮಯಕ್ಕೆ ಬಳಸಿಕೊಂಡು ಆ ಹೆಣ್ಣುಮಗಳ ಬಗ್ಗೆ ಕೀಳಾಗಿ ಸ್ಪೀಕರ್ ಮಾತನಾಡುತ್ತಿದ್ದು, ಇದು ಅವರ ಸ್ಥಾನಕ್ಕೆ ಎಳ್ಳಷ್ಟು ಸರಿ ಹೊಂದುವುದಿಲ್ಲ, ಕೂಡಲೇ ಸ್ಪೀಕರ್ ರಮೇಶ್ ಕುಮಾರ್ ಅವರು ಕ್ಷಮೆ ಕೇಳ ಬೇಕು ಎಂದು ಆಗ್ರಹಿಸಿದ್ದಾರೆ.
ಅಲ್ಲದೇ ನಟಿ ತಾರಾ ಕೂಡ ಸ್ಪೀಕರ್ ಹೇಳಿಕೆಗೆ ಬೇಸರ ವ್ಯಕ್ತಪಡಿಸಿದ್ದು, , ‘ನನ್ನ ಸ್ಥಿತಿ ಅತ್ಯಾಚಾರ ಸಂತ್ರಸ್ತೆಯಂತಾಗಿದೆ ಎಂದು ಹೇಳಿಕೆ ನೀಡಿರುವುದು ನಮಗೆ ಭಾರೀ ಬೇಸರ ಮೂಡಿಸಿದೆ, ನಿಮ್ಮಿಂದ ಇಂತಹ ಮಹಿಳಾ ವಿರೋಧಿ ಹೇಳಿಕೆ ನಿರೀಕ್ಷಿಸಿರಲಿಲ್ಲ. ಇದನ್ನು ನಾವು ಖಂಡಿಸುತ್ತೇವೆ. ನಿಮ್ಮ ಬಾಯಲ್ಲಿ ಇಂತಹ ಮಾತು ಬಾರಬಾರದಿತ್ತು ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.