ವಿಜಯನಗರ: ಶ್ರೀರಾಮ ದೇವರಲ್ಲ, ಆತ ರಾಜಕುಮಾರ ಎಂದು ಕಾಂಗ್ರೆಸ್ ನಾಯಕ ವಿಎಸ್ ಉಗ್ರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಜೊತೆಗೆ ಪ್ರಧಾನಿ ಮೋದಿ ವಿರುದ್ಧವೂ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ವಿಜಯನಗರದಲ್ಲಿ ಮಾತನಾಡಿದ ಅವರು ರಾಮ ದೇವರಲ್ಲ. ಆತ ರಾಜಕುಮಾರ, ಆತನಿಗೆ ದೈವತ್ವ ಬಂದಿದ್ದು ಆತನ ಕೆಲಸಗಳಿಂದಲೇ ಹೊರತು ಆತ ದೇವರಲ್ಲ ಎಂದು ವಿಎಸ್ ಉಗ್ರಪ್ಪ ಪುನರುಚ್ಚರಿಸಿದ್ದಾರೆ. ಶ್ರೀರಾಮನ ಬಗ್ಗೆ ಕಾಂಗ್ರೆಸ್ ನಾಯಕರು ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಬಂದಿದ್ದಾರೆ. ಅವರ ಲಿಸ್ಟ್ ಗೆ ಈಗ ಉಗ್ರಪ್ಪ ಕೂಡಾ ಸೇರ್ಪಡೆಯಾಗಿದ್ದಾರೆ.
ಮೋದಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ
ಶ್ರೀರಾಮ ಅಶ್ವಮೇಧ ಯಾಗ ಮಾಡುವಾಗ ಸೀತೆ ಇಲ್ಲ ಎಂಬ ಕಾರಣಕ್ಕೆ ವಸಿಷ್ಠ ಮಹರ್ಷಿಗಳು ಸೀತೆಯ ಚಿನ್ನದ ಪುತ್ಥಳಿಯನ್ನು ಪಕ್ಕ ಕೂರಿಸಿ ಪೂಜೆ ಮಾಡಲು ಹೇಳಿದ್ದರು. ಅದರಂತೆ ರಾಮ ಪತ್ನಿಯ ಪುತ್ಥಳಿ ಮಾಡಿ ಪೂಜೆ ಮಾಡಿದ. ಆದರೆ ನೀನು ಏನು ಮಾಡಿದೆ? ಅಯೋಧ್ಯೆಯಲ್ಲಿ ಪೂಜೆ ಮಾಡುವಾಗ ಪತ್ನಿಯನ್ನು ಬಿಟ್ಟು ಪೂಜೆ ಮಾಡಿದೆ. ಇದು ಧರ್ಮಕ್ಕೆ ವಿರುದ್ಧವಲ್ಲವೇ? ರಾಮನ ಹೆಸರು ಹೇಳಿಕೊಂಡು ರಾಜಕೀಯ ಮಾಡುವುದು, ಜನರನ್ನು ದಾರಿ ತಪ್ಪಿಸುವುದು ಭಾರತೀಯ ಸಂವಿಧಾನದ ಪ್ರಕಾರ ಅಪರಾಧ. ಆಕೆ ಇಲ್ಲಿ ಅಂಜನಾದ್ರಿ ಬೆಟ್ಟಕ್ಕೂ ಭೇಟಿ ನೀಡಿದ್ದರು. ನಿನಗೆ ಹೆಂಗ್ರಿ ಮನಸ್ಸು ಬರುತ್ತೆ?
ಲೋಕಸಭೆ ಚುನಾವಣೆಯಲ್ಲಿ ನಿನಗೆ ಯಾವ ಪುರುಷಾರ್ಥಕ್ಕೆ 400 ಸೀಟು ಕೊಡಬೇಕು. ಚೀನಾ, ಪಾಕಿಸ್ತಾನ, ಮಾಲ್ಡೀವ್ಸ್ ಸೇರಿ ಅಕ್ಕಪಕ್ಕದ ದೇಶಗಳು ನಮ್ಮ ವಿರುದ್ಧ ಇವೆ ಅಂತ ಕುಟುಕಿದರು. ಕಳೆದ ಬಾರಿ ಪುಲ್ವಾಮ ಹೆಸರಿನಲ್ಲಿ ಚುನಾವಣೆ ಎದುರಿಸಿದ್ದಿರಿ, ಈ ಬಾರಿ ರಾಮನ ಹೆಸರಿನಲ್ಲಿ ಚುನಾವಣೆ ಎದುರಿಸಿದ್ದಿರಿ.