ರಾಜ್ಯವನ್ನ ಅಭಿವೃದ್ಧಿ ಪತದತ್ತ ತೆಗೆದುಕೊಂಡು ಹೋಗಿ ಅಂತ ಸಿದ್ದರಾಮಯ್ಯಗೆ ಶುಭ ಹಾರೈಕೆ

ಗುರುವಾರ, 18 ಮೇ 2023 (17:29 IST)
ದೇವೇಗೌಡರು 91ನೇ ಜನ್ಮ ದಿನಕ್ಕೆ ಕಾಲಿಟ್ಟಿದ್ದಾರೆ.ವೆಂಕಟೇಶ್ವರ ಸನ್ನಿದಾನ, ಅವರ ಆರೋಗ್ಯ ಸಮಸ್ಯೆ ಕೈಮೀರಿದಾಗ ಈ ಕ್ಷೇತ್ರದಲ್ಲಿ ಪೂಜೆ ಮಾಡಿಸ್ತೇವೆ. ದೇವೇಗೌಡರ ಆಯುಷ್ಯಕ್ಕೆ ಇಲ್ಲಿ ಪೂಜೆ ಮಾಡಿಸಲಾಗಿತ್ತು.ಜೀವಕ್ಕೆ ಅಪಾಯ ಬರದಂತೆ ಆಯುಷ್ಯ ಹೋಮ ಮಾಡುವ ಕೆಲಸ ಮಾಡಲಾಗಿದೆ.ಕುಟುಂಬ ಕೂಡ ಅವರ ಆಯುಷ್ಯಕ್ಕೆ ಪೂಜೆ ಮಾಡಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ರು .
 
ಅಲ್ಲದೇ ನನ್ನ ವಯಕ್ತಿಕ ಅಭಿಪ್ರಾಯ ಅವರು ಮನೆಯಲ್ಲಿದ್ದು ಸಲಹೆ ನೀಡಿದ್ರೆ ಸಾಕು.ಅವರು ಚುನಾವಣಾ ಫಲಿತಾಂಶ ಫಲಿತಾಂಶ ಆತಂಕದಲ್ಲಿ ಅವರೇ ನಾಯಕತ್ವ ವಹಿಸೋದು ಬೇಡ.ಯಾಕಂದ್ರೆ ನನಗೆ ಅವರ ಆರೋಗ್ಯ ಮುಖ್ಯ.ನಾವಿನ್ನು ರಾಜಕಾರಣದಲ್ಲಿ ಅಷ್ಟು ಕ್ಷೀಣಿಸಿಲ್ಲ.ಚುನಾವಣೆಯಲ್ಲಿ ಸೋಲು, ಗೆಲುವು ಸರ್ವೇ ಸಾಮಾನ್ಯ.ದೇವೇಗೌಡರು 1989ರಲ್ಲಿ ಎರಡು ಕಡೆ ಸೋತು, ಎರಡೇ ಸ್ಥಾನ ಗೆಲ್ಲಲಾಗಿತ್ತು.ಐದೇ ವರ್ಷದಲ್ಲಿ ಪಕ್ಷ ಸಂಘಟನೆ ಮಾಡಿ, ದೇಶದ ಕೆಂಪು ಕೋಟೆ ಮೇಲೆ ಧ್ವಜ ಹಾರಿಸಿದ್ರು.ನಮ್ಮ ಪಕ್ಷಕ್ಕೆ ದೊಡ್ಡ ಇತಿಹಾಸ ಇದೆ.ಎರಡೂ ರಾಷ್ಟ್ರೀಯ ಪಕ್ಷಗಳ ಕುತಂತ್ರಕ್ಕೆ ನಾವು ಬಲಿಯಾಗಿದ್ದೇವೆ.ಮುಂದಿನ ದಿನಗಳಲ್ಲಿ ಜನತೆ ಈಗಿನ ಫಲಿತಾಂಶ ಬಗ್ಗೆ ಅವರಿಗೆ ಮನವರಿಕೆ ಆಗಲಿದೆ.ಜನತಾದಳ ಪಕ್ಷದ ಅನಿವಾರ್ಯತೆ ಬಗ್ಗೆ ಗೊತ್ತಾಗಲಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ರು.
 
ಸಿದ್ದರಾಮಯ್ಯ ಸಿಎಂ ಆಗ್ತಿರೋ ವಿಚಾರವಾಗಿಯೂ ಪ್ರತಿಕ್ರಿಯಿಸಿದ್ದು,ಅವರಿಗೆ ಒಳ್ಳೆಯದಾಗಲಿ, ನೋಡೋಣ ಏನೇನ್ ಮಾಡ್ತಾರೆ ಅಂತ.ಒಳ್ಳೆಯದಾಗ್ಲಿ ಅಂತ ಬಯಸ್ತೀನಿ.ಒಳ್ಳೆಯ ಕಾರ್ಯಕ್ರಮಕ್ಕೆ ಸಹಕಾರ ಇದೆ.ಒಳ್ಳೆಯ ಕಾರ್ಯಕ್ರಮ ಕೊಡಿ ಅಂತ ಸಲಹೆ ನೀಡ್ತೀನಿ.ಜನತೆಗೆ ಹಲವು ಭರವಸೆ ನೀಡಿದ್ದೀರಿ.ಭರವಸೆ ಈಡೇರಿಸಿ.ರಾಜ್ಯವನ್ನ ಅಭಿವೃದ್ಧಿ ಪತದತ್ತ ತೆಗೆದುಕೊಂಡು ಹೋಗಿ ಅಂತ ಶುಭ ಹಾರೈಸ್ತೀನಿ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ