ಸಿದ್ದರಾಮಯ್ಯ ಸಿಎಂ ಎಂದು ಅಧಿಕೃತ ಘೋಷಣೆ ಹಿನ್ನೆಲೆ ಅಭಿಮಾನಿಗಳ ಸಂಭ್ರಮ

ಗುರುವಾರ, 18 ಮೇ 2023 (17:54 IST)
ಸಿದ್ದರಾಮಯ್ಯ ಸಿಎಂ ಎಂದು ಅಧಿಕೃತ ಘೋಷಣೆ ಹಿನ್ನೆಲೆ.ಸಿದ್ದರಾಮಯ್ಯ ನಿವಾಸದ ಬಳಿ ಕೇಕ್ ಕತ್ತರಿಸಿ ಸಿದ್ದರಾಮಯ್ಯ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.ನಾಳೆ ದೆಹಲಿಗೆ ಮತ್ತೆ  ಸಿದ್ದರಾಮಯ್ಯ ಡಿಕೆಶಿವಕುಮಾರ್ ವಾಪಸ್ಸಗಲ್ಲಿದ್ದು,ಕ್ಯಾಬಿನೇಟ್ ರಚನೆ ಸಂಬಂಧ ನಾಳೆ ಮತ್ತೆ ದೆಹಲಿಗೆ ಪ್ರವಾಸ ಕೈಗೊಳ್ಳಲಿದ್ದಾರೆ.
 
ಸಿದ್ರಾಮಯ್ಯ ಸಿಎಂ ಘೋಷಣೆ ಹಿನ್ನೆಲೆ ಕುರುಬ ಸಂಘದಿಂದ ಸಂಭ್ರಮಾಚರಣೆ ಸಿದ್ಧತೆ ಮಾಡಿಕೊಳ್ಳಲಾಗಿದೆ.ಗಾಂಧಿನಗರದಲ್ಲಿರುವ ಕರ್ನಾಟಕ ಕುರುಬ ಸಂಘ
ಸಿದ್ದು ಬೃಹತ್ ಕಟೌಟ್ ಹಾಕಿ ಶುಭಾಶಯವನ್ನ ಕುರುಬ  ಸಂಘ ಕೋರಿದೆ.ಪಟಾಕಿ‌ ಸಿಡಿಸಿ ಸಂಘದ ಮುಖಂಡರು, ಸದಸ್ಯರು, ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ.ಮುಖ್ಯಮಂತ್ರಿ ಸಿದ್ರಾಮಯ್ಯ ಜೈ ಎಂದು ಅಭಿಮಾನಿಗಳು ಘೋಷಣೆ ಕೂಗಿದ್ದಾರೆ.ಅಲ್ಲದೆ ಸಿದ್ದರಾಮಯ್ಯ ನಿವಾಸದ ಮುಂದೆ ಅಭಿಮಾನಿಗಳಿಂದ ಸಂಭ್ರಮಾಚರಣೆ ಮುಗಿಲುಮುಟ್ಟಿದೆ.ಸಿದ್ದರಾಮಯ್ಯ ಪೋಟೋ ಗೆ ಕರ್ಪೂರ ಆರತಿ‌ ಅಭಿಮಾನಿಗಳು ಬೆಳಗಿದ್ದು,26ಈಡಗಾಯಿ ಒಡೆದು ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ