ರಾಷ್ಟ್ರಧ್ವಜದ ಮೇಲೆ ಪ್ರೀತಿ ಹೆಚ್ಚಾಗಿದೆ

ಗುರುವಾರ, 17 ಫೆಬ್ರವರಿ 2022 (19:05 IST)
ಕಾಂಗ್ರೆಸ್ ಅಹೋರಾತ್ರಿ‌ ಧರಣಿ ಹಿನ್ನೆಲೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಣಿ ಚೆನ್ನಮ್ಮ‌ ಮೈದಾನದಲ್ಲಿ ಏನು‌ ಮಾಡಿದರು? 11 ಜನರನ್ನು ಗುಂಡು ಹಾರಿಸಿ ಕೊಂದರು.
ರಾಷ್ಟ್ರಧ್ವಜದ ಬಗ್ಗೆ ಎಲ್ಲಿಲ್ಲದ ಪ್ರೀತಿ ಹುಟ್ಟಿದೆ. ಲಾಲ್ ಚೌಕದ ಮೇಲೆ ಪಾಕ್ ಧ್ವಜ ಹಾರಿಸಿ ಎಂದು ಒತ್ತಡ ಹಾಕಿದ್ದರು. ಉಗ್ರಗಾಮಿಗಳು‌ ಪಾಕ್ ಧ್ವಜ ಹಾರಿಸೋಕೆ ಒತ್ತಡ ಹಾಕಿದರು. ಅಲ್ಲಿ ನಾವು ರಾಷ್ಟ್ರಧ್ವಜ ಹಾರಿಸಿ ಬಂದವರು ಎಂದರು.
 
ರಾಣಿ ಚೆನ್ನಮ್ಮ‌ಮೈದಾನದಲ್ಲಿ ಗುಂಡು ಹಾರಿಸಿದ್ದು ಹೇಗೆ? ಜೆಎಂಎಂ ಪ್ರಾಡಕ್ಟ್ ಗಳು ಇವರ ಜೊತೆ ಸೇರಿದ್ದಾರೆ. ಕನ್ಹಯ್ಯ ಸೇರಿ ಹಲವರು ಬಂದಿದ್ದಾರೆ. ಹಿಜಾಬ್ ಮರೆಮಾಚಲು ವಿಷಯಾಂತರ ಮಾಡುತ್ತಿದ್ದಾರೆ.
 
ರಾಷ್ಟ್ರಧ್ವಜ ತೆಗೆದು ಹಾರಿಸುತ್ತೇವೆ ಅಂದರೆ ತಪ್ಪು. ರಾಷ್ಟ್ರಧ್ವಜದ ಕೆಳಗೆ ಹಾರಿತ್ತೇವೆ ಅಂದರೆ ತಪ್ಪಿಲ್ಲ. ರಾಷ್ಟ್ರಧ್ವಜಕ್ಕೆ ನಾವು ಗೌರವ ಕೊಡುತ್ತೇವೆ. ಅಖಂಡ ಭಾರತ ನಮ್ಮ ಆಶಯ ಎಂದು ಸಿಟಿ ರವಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ