ಜಗದೀಶ್‌ ಶೆಟ್ಟರ್‌ ನಿರ್ಗಮನದಿಂದ ಕಾಂಗ್ರೆಸ್‌ ಕಾರ್ಯಕರ್ತರಿಗೆ ಸಂತಸ

geetha

ಶುಕ್ರವಾರ, 26 ಜನವರಿ 2024 (18:08 IST)
ಬೆಂಗಳೂರು :  ಕೆಪಿಸಿಸಿ ಭವನದಲ್ಲಿ  ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ  ಡಿಸಿಎಂ ಡಿ.ಕೆ. ಶಿವಕುಮಾರ್‌ ಇಷ್ಟು ದಿನ ಜಗದೀಶ್‌ ಶೆಟ್ಟರ್‌ ಅವರನ್ನು ಕರೆತಂದಿದ್ದಕ್ಕೆ ಅಲ್ಪಸಂಖ್ಯಾತರು, ದಲಿತರು ಹಾಗೂ ಮತ್ತಿತರ ವರ್ಗಗಳಿಂದ ವಿರೋಧದಿಂದಾಗಿ ಮುಜುಗರ ಎದುರಿಸುತ್ತಿದ್ದ ಕಾರ್ಯಕರ್ತರಿಗೆ ಈಗ ನಿರಾಳವಾಗಿದೆ ಎಂದರು. ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರು ಕಾಂಗ್ರೆಸ್‌ ತೊರೆದು ಮತ್ತೆ ಬಿಜೆಪಿ ಪಕ್ಷಕ್ಕೆ ಸೇರಿರುವುದರಿಂದ ಕಾಂಗ್ರೆಸ್‌ ಕಾರ್ಯಕರ್ತರು ಅತ್ಯಂತ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಬಿಜೆಪಿಯಲ್ಲಿ ನಡೆದ ಆಂತರಿಕ ಕಚ್ಚಾಟದಿಂದಾಗಿ ಜಗದೀಶ್‌ ಶೆಟ್ಟರ್‌ ಕಾಂಗ್ರೆಸ್‌ ಪಕ್ಷಕ್ಕೆ ಬೇಷರತ್ತಾಗಿ ಸೇರ್ಪಡೆಯಾಗಿದ್ದರು. ನಾವೂ ಸಹ ಅವರ ಹಿರಿತನವನ್ನು ಪರಿಗಣಿಸಿ ನಮ್ಮ ಕಾರ್ಯಕರ್ತರಿಗೆ ದ್ರೋಹ ಮಾಡಿ ಅವರಿಗೆ ಟಿಕೆಟ್‌ ನೀಡಿದೆವು. ಆದರೂ ಅವರು 35000 ಮತಗಳ ಅಂತರದಿಂದ ಸೋತರು. ಆದರೂ ಮಾಜಿ ಸಿಎಂ ಎಂಬ ಗೌರವದಿಂದ ನಾವು ವಿಧಾನ ಪರಿಷತ್‌ ಸ್ಥಾನ ನೀಡಿದ್ದೆವು .ಕಳೆದ ಮೂರು ತಿಂಗಳಿಂದ ಅವರು ಬಿಜೆಪಿ ನಾಯಕರೊಡನೆ ಸಂಪರ್ಕ ಹೊಂದಿರುವ ವಿಷಯ ತಿಳಿದಿದ್ದರೂ ಸುಮ್ಮನಿದ್ದವು ಎಂದು ಡಿಕೆಶಿ ಹೇಳಿದರು 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ