ಸಚಿವರ ಎದುರಲ್ಲೇ ಬಡಿದಾಡಿಕೊಂಡ ಬಿಜೆಪಿ

geetha

ಬುಧವಾರ, 24 ಜನವರಿ 2024 (18:22 IST)
ತುಮಕೂರು :ಕೇಂದ್ರ ಹಾಗು ರಾಜ್ಯ ಸರ್ಕಾರವು ಜಂಟಿಯಾಗಿ ಉಂಡೆ ಕೊಬ್ಬರಿ ಖರೀದಿ ಕೇಂದ್ರ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ವೇಳೆ ಕೆಲವು ಬಿಜೆಪಿ ಕಾರ್ಯಕರ್ತರು  ಬಿಜೆಪಿ ಬಾವುಟವನ್ನು ಧರಿಸಿಕೊಂಡು ಬಂದಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿ ಬಾವುಟದೊಂದಿಗೆ ಆಗಮಿಸುವುದನ್ನು ವಿರೋಧಿಸಿದರು. ಇದಕ್ಕೆ ಕೆರೆಳಿದ ಬಿಜೆಪಿ ಕಾರ್ಯಕರ್ತರು ಬೇಕಿದ್ದರೆ ನೀವೂ ಕೂಡ ಹಾಕಿಕೊಂಡು ಬನ್ನಿ ಎಂದು ಕೈ ಕಾರ್ಯಕರ್ತರ ಕಾಲೆಳೆದರು. ಇಲ್ಲಿಂದ ಮಾತಿನ ಚಕಮಕಿ ತೀವ್ರ ಹಂತಕ್ಕೆ ತಲುಪಿತು. 

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಗೃಹಸಚಿವ ಪರಮೇಶ್ವರ್‌ ಎದುರಿನಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಕೈಕೈ ಮಿಲಾಯಿಸಿಕೊಂಡಿರುವ ಘಟನೆ ಬುಧವಾರ ತುಮಕೂರಿನಲ್ಲಿ ನಡೆದಿದೆ.  ಸಚಿವ ಶಿವಾನಂದ್‌ ಪಾಟೀಲ್‌ ಕೂಡ ಈ ಘಟನೆಗೆ ಮೂಕಪ್ರೇಕ್ಷಕರಾಗಿದ್ದಾರೆ. 

ಗೃಹಸಚಿವ ಜಿ. ಪರಮೇಶ್ವರ್‌ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ  ಮತ್ತು ಶಿವಾನಂದ ಪಾಟೀಲರ ಮನವಿಗೂ ಎರಡೂ ಬದಿಯ ಕಾರ್ಯಕರ್ತರು ಕಿವಿಗೊಡಲಿಲ್ಲ. ಕೊನೆಗೆ ಸ್ಥಳದಲ್ಲಿದ್ದ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ