ಸರ್ಕಾರದ ಜೊತೆ ಸಹಕರಿಸಿ,ಇಲ್ಲವಾದಲ್ಲಿ ಲಾಕ್‌ಡೌನ್:ಆರಗ ಜ್ಞಾನೇಂದ್ರ

ಮಂಗಳವಾರ, 4 ಜನವರಿ 2022 (18:05 IST)
ಕೋವಿಡ್ ಎರಡನೇ ಅಲೆಯಲ್ಲಿ ಸಂಭವಿಸಿದಂತೆ ಮತ್ತೆ ಸಾವು ನೋವುಗಳು ಆಗಬಾರದು. ಈ ಮಾಡಲು ಸಾರ್ವಜನಿಕರು ಸರ್ಕಾರದ ಜೊತೆಗೆ ಸಹಕಾರ. ಇಲ್ಲವಾದಲ್ಲಿ ಲಾಕ್‌ಡೌನ್ ಜಾರಿ ಮಾಡುವುದು ಅನಿವಾರ್ಯ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿದೆ. ಈ ವಿಚಾರದಲ್ಲಿ ಎಲ್ಲರೂ ಯೋಚಿಸುವ ಅಗತ್ಯವಿದೆ. ಮಾಸ್ಕ್ಗಳಿಲ್ಲದೆ ತಿರುಗಾಡುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಮದುವೆ ಮತ್ತು ಇತರ ಸಮಾರಂಭಗಳಲ್ಲಿ ಸೇರುತ್ತಿದ್ದಾರೆ ಇದಕ್ಕೆ ಜನರು ಕಡಿವಾಣ ಹಾಕಬೇಕು.
ಜನರ ಜೀವ ಉಳಿಸುವ ಸಲುವಾಗಿ ಆರ್ಥಿಕ ಅಭಿವೃದ್ಧಿಯನ್ನು ತ್ಯಾಗಮಾಡಬೇಕಾಗಿ ಬರುತ್ತದೆ. ಶಾಲಾ ಕಾಲೇಜುಗಳಿಗೆ ಬಂದ್ ಇದೆಲ್ಲದನ್ನೂ ತಪ್ಪಿಸಬೇಕು ಎನ್ನುವುದಾದರೆ ಸಾರ್ವಜನಿಕರು ಸಹಕಾರ ನೀಡಬೇಕು.
ಸಧ್ಯಕ್ಕೆ ಲಾಕ್‌ಡೌನ್ ಆಲೋಚನೆ ಇಲ್ಲವಾದರೂ ಸಭೆ ಸೇರಿ ಸಮಾಲೋಚನೆ ನಡೆಸುತ್ತಿದೆ. ಬೆಂಗಳೂರಿನಲ್ಲೇ ನಿನ್ನೆ ಸೋಂಕಿತರ ಸಂಖ್ಯೆ ೯೦೦ರ ಗಡಿ ದಾಟಿದೆ. ಮುಂದೇನೆಂಬುದು ಗೊತ್ತಿಲ್ಲ ಎಂದರು.
ಸಧ್ಯಕ್ಕೆ ನೈಟ್ ಕರ್ಫ್ಯು ಮುಂದುವರಿಯಲಿದೆ. ಮುಖ್ಯಮಂತ್ರಿಗಳು ಸಹ ಇದನ್ನು ಹೇಳಿದ್ದಾರೆ. ಜನ ಜಾಗೃತಿ ಮೂಡಿಸುವುದು ಸಹ ಇದರ ಉದ್ದೇಶವಾಗಿದೆ ಎಂದರು.
ಕಾಂಗ್ರೆಸ್ ಪಾದಯಾತ್ರೆಗೆ ಅನುಮತಿ ಇಲ್ಲ ಎಂದು ಪಕ್ಷದ ಮುಖ್ಯಸ್ಥರು ಹೇಳಿದ್ದಾರೆ. ರಸ್ತೆಯಲ್ಲಿ ಸ್ವಲ್ಪ ಜನ ನಡೆದು ಹೋಗಬೇಕಿಲ್ಲ. ಆದರೆ ಕೋವಿಡ್ ಕಾನೂನುಗಳನ್ನು ಮುರಿಯಬಾರದು. ಈ ಅನುಮತಿ ಪಡೆಯುವುದು, ಬಿಡುವುದು ಬೇರೆ ಆದರೆ ನಿಬಂಧನೆಗಳನ್ನು ಎಲ್ಲರೂ ಸ್ವಯಂ ಅಳವಡಿಸಿಕೊಳ್ಳಬೇಕು.
ಚಿಕ್ಕಮಗಳೂರು ಜಿಲ್ಲೆ ಕೋವಿಡ್ ಲಸಿಕೆ ಹಾಕುವಲ್ಲಿ ಮೊದಲ ಡೋಸ್ ಶೇ.97 ಹಾಗೂ ಎರಡನೇ ಡೋಸ್ ಶೇ.81ರಷ್ಟು ಸಾಧನೆ ಮಾಡಿದೆ. ರಾಜ್ಯದ ಸರಾಸರಿಗಿಂತ ಜಿಲ್ಲೆ ಮುಂದಿದೆ ಚಿಕಿತ್ಸೆ ಹಾಗೂ ಆರೋಗ್ಯ ಕಾರ್ಯಕರ್ತೆಯರನ್ನ ಅಭಿನಂದಿಸುತ್ತೇನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ