ಕೋವಿಡ್ ಎರಡನೇ ಅಲೆ ಆತಂಕ

ಶುಕ್ರವಾರ, 16 ಜುಲೈ 2021 (17:22 IST)
ದೇಶಾದ್ಯಂತ ಸಾವಿರಾರು ಜೀವಗಳನ್ನು ಬಲಿ ಪಡೆದ ಕೋವಿಡ್ 2 ನೇ ಅಲೆ ಇನೇನು ಕಮ್ಮಿಯಾಯ್ತು ಅಂತ ನಿಟ್ಟಿಸಿರು ಬಿಡುವಸ್ಟರಲ್ಲಿ ಮತ್ತೊಂದು ಅಲೆಯ ಆತಂಕ ಮನೆ ಮಾಡಿದೆ . ಮುಂದಿನ ತಿಂಗಳೇ ರಾಜ್ಯಕ್ಕೆ ಗಂಡಾಂತರ ಇದೆ ಇಡೀ ದೇಶಕ್ಕೆ ಎಚ್ಚರಿಕೆ ನೀಡಿದೆ. ಭಾರತದಲ್ಲಿ ಕೊರೋನಾ ಅಬ್ಬರ ಕಡಿಮೆ ಆಯ್ತು ಹೀಗಾಗಿ ಬಹುತೇಕ ರಾಜ್ಯಗಳು ಅನ್​​ಲಾಕ್​​ ಘೋಷಿಸಿವೆ, ಮತ್ತೆ ನಾರ್ಮಲ್​​ ರೀತಿ ಎಲ್ಲವೂ ಒಪೆನ್ ಆಗಿದೆ ಅಂತ ರಿಲ್ಯಾಕ್ಸ್  ಅನ್ನೋಷ್ಟರಲ್ಲಿ ಮೂರನೇ ಅಲೆಯ ಆತಂಕ ಮನೆ ಮಾಡಿದೆ. ಮೂರನೇ ಅಲೆ ಮುಂದಿನ ತಿಂಗಳಿನಲ್ಲೇ ಬರಲಿದೆ ಎಂದು SBIನ ಸಂಶೋಧನಾ ವರದಿ ತಿಳಿಸಿದೆ.
ಕೋವಿಡ್ -19 ದಿ ರೇಸ್ ಟು ದಿ ಫಿನಿಶಿಂಗ್ ಲೈನ್' ಎಂಬ ವರದಿಯು ದೇಶದಲ್ಲಿ ಮತ್ತಷ್ಟು ಸಾವು ನೋವು ಸಂಭವಿಸುವ ಸುಳಿವು ನೀಡಿದೆ. ಎರಡನೇ ಅಲೆಗಿಂತ 1.7 ಪಟ್ಟು ಹೆಚ್ಚಾಗಿರುವ ಸಾಧ್ಯತೆ ಇದೇ ಅಂತ ವರದಿ ರಿಪೋರ್ಟ್ ಮಾಡಿದೆ. SBI ನಲ್ಲಿರುವ ಮುಖ್ಯ ಅಂಶಗಳಾದ ಆಗಸ್ಟ್ ನಲ್ಲಿ ಪ್ರಕರಣ ಮತ್ತೆ 10 ಸಾವಿರಕ್ಕೆ ಏರಿಕೆ  ಸೆಪ್ಟೆಂಬರ್ ನಲ್ಲಿ ಪಿಕ್ ಗೆ ತಲಪುವ ಕೋವಿಡ್ ಪ್ರಕರಣ,  ಕೊರೊನ ರೂಪಾಂತರಿ ಹೆಚ್ಚು ಬಲ ಗೊಳ್ಳುವ ಸಾಧ್ಯತೆ ಇದೆ. ಇದನ್ನು ತಡೆಯಲು 2 ಡೋಸ್ ಪಡೆಯುವುದು ಅಗತ್ಯ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ