ಲವ್ ಬ್ರೇಕ್ ಅಫ್, ಎಣ್ಣೆ ಏಟು, ಒಡೆದಿದ್ದು ಮಾತ್ರ ಕಾರು ಗ್ಲಾಸ್

ಶುಕ್ರವಾರ, 16 ಜುಲೈ 2021 (17:17 IST)
ಬೆಂಗಳೂರು: ಲವ್ ಬ್ರೇಕ್ ಅಫ್ ಅಗಿದ್ದಕ್ಕೆ ಇಲ್ಲೊಬ್ಬ ಪಾಗಲ್ ಪ್ರೇಮಿ ಮಾಡಿದ್ದು ಅದೇಂತಾ ದೊಡ್ಡ  ಅವಾಂತರ ಗೊತ್ತಾ. ಮೂರು ವರ್ಷದ ಪ್ರೀತಿಗೆ ಎಳ್ಳು ನೀರು ಬಿಟ್ಟಿದ್ದಕ್ಕೆ.ಇತ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಗ್ಲಾಸ್ ಗೆ ಎಳ್ಳು ನೀರು ಬಿಟ್ಟಿದ್ದಾನೆ. ಈತನ ಹುಚ್ಚು ಕೆಲಸದಿಂದ ಕಾರು ಮಾಲೀಕರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಗೊತ್ತಾ!
 
ಪ್ರೀತಿಗೆ ಕಣ್ಣಿಲ್ಲ ನಿಜ ಹಾಗಾಂತ ಕಾರು ಗ್ಲಾಸ್ ಗೆ ಬೆಲೆಯಿಲ್ವಾ ನೀವೆ ಹೇಳಿ.ಯಾಕಪ್ಪ ಇವರು ಹೀಗೆ ಹೇಳ್ತಿದ್ದಾರೆ ಅಂದ್ಕೊಂಡ್ರಾ...?  ಈ ದೃಶ್ಯಗಳನ್ನ ಒಮ್ಮೆ ಸರಿಯಾಗಿ ನೋಡಿ.. ಕಾರಿನ ಗಾಜುಗಳೆಲ್ಲ ಪುಡಿಯಾಗಿದೆ ಅದರೊಳಗೆ ಒಂದು ದೊಡ್ಠ ಸೇಜುಗಲ್ಲು ಬೇರೆ ಬಿದ್ದಿದೆ. ಈ ಅವಾಂತರಗಳೆನ್ನ ಮಾಡಿದ್ದು ಒಬ್ಬ ಪಾಗಲ್ ಪ್ರೇಮಿ. ಹೌದು ಈ ಪೊಟೋದಲ್ಲಿ ಇದಾನಲ್ಲ ಈವನೆ ಅಸಾಮಿ. ಹೆಸರು ಸತೀಶ್.ಕಾರ್ ಫೆಂಟರ್ ಕೆಲಸ ಮಾಡಿಕೊಂಡಿದ್ದ.‌ ಈ ಸತೀಶ್ ಸುಮಾರು 3 ವರ್ಷಗಳಿಂದ ತಮಿಳುನಾಡಿನ ಓರ್ವ ಹುಡುಗಿಯನ್ನ ಪ್ರೀತಿಸ್ತಿದ್ನಂತೆ. ಅದ್ರೆ ಈತ್ತಿಚಿಗೆ ಅಕೆ ಇವನನ್ನ ಅವೈಡ್ ಮಾಡ್ತಾಬಂದ್ಲಿದ್ಲಂತೆ. ನಿನ್ನೆ ಇಬ್ಬರ ಮಧ್ಯೆ ಜಗಳವಾಗಿದೆ ಅಕೆ ಬ್ರೇಕ್ ಅಫ್ ಎಂದಿದ್ದಾಳೆ.ಅಷ್ಟಕ್ಕೆ ಫುಲ್ ಟೈಟ್ ಅಗಿ ಅ ಫಸ್ಟ್ರೇಷನ್ ನಲ್ಲಿ ಈ ಪಾಗಲ್ ಪ್ರೇಮಿ. ಬಸವೇಶ್ವರ ನಗರ ಹಾಗೂ ಮಹಾಲಕ್ಷ್ಮಿ ಲೇಔಟ್ ಎರಡು ಕಡೆ ಪುಂಡಾಟ ಮೆರೆದಿದ್ದಾನೆ.ತಡ ರಾತ್ರಿ 1:30 ರ ಹೊತ್ತಿಗೆ ಬಸವೇಶ್ವರ ನಗರದ ಓಲಿಟಿ ಆರ್ಫಾಟ್ ಮೆಂಟ್ ಎದುರುಗಡೆ ನಿಲ್ಲಿಸಿದ್ದ 5 ಕಾರುಗಳ ಗಾಜನ್ನ ದೊಣ್ಣೆಯಿಂದ ಒಡೆದಿದ್ದಾನೆ. ಸಪ್ತಗಿರಿ ಡ್ರೈವಿಂಗ್ ಸ್ಕೂಲ್ ನ ಕಾರಿನ ಗಾಜನ್ನ ಸೇಜುಗಲ್ಲು ಎತ್ತಿಹಾಕಿ ಪುಡಿ ಪುಡಿ ಮಾಡಿದ್ದಾನೆ. ಇಂತವರಿಗೆ ಸರಿಯಾದ ಶಿಕ್ಷೆ ನೀಡುವಂತೆ ಕಾರು ಮಾಲೀಕರು ಆಗ್ರಹಿಸಿದ್ದಾರೆ.ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬಸವೇಶ್ವರ ನಗರ ಪೊಲೀಸರು ಅತನನ್ನ ಬಂಧಿಸಿದ್ದಾರೆ.ಎಣ್ಣೆ ಏಟು ಇಳಿದ ನಂತರ ತನ್ನ ತಪ್ಪಿನ ಅರಿವಾಗಿ ಇನ್ನೊಮ್ಮೆ ಮಾಡೊಲ್ಲ ಬಿಟ್ಟು ಬಿಡಿ ಎಂದು ಅಂತಿದ್ದಾನಂತೆ.ಅಷ್ಟೆ ಅಲ್ಲದೆ ಅ ಎಲ್ಲಾ ಕಾರುಗಳ ಗ್ಲಾಸ್ ಅನ್ನ ಹಾಕಿಸಿ ಕೊಡ್ತಿನಿ ಅಂತಿದ್ದಾನೆ.ಇತ್ತ ಕಡೆ ಕಾರಿನ ಮಾಲೀಕರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.ಒಟ್ಟಾರೆ ಇತನ ಪ್ರೀತಿ ಪೀಕಲಾಟದೊಳಗೆ ಕಾರಿನ ಮಾಲೀಕರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.ಕೊರೊನಾ ನಡುವೆ ಮೊದಲೆ ಕೈಯಲ್ಲಿ ಹಣವಿಲ್ಲ ಮುಂದೇನು ಎಂದು ಚಿಂತೆ ಪಡುವಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ