ಹಾಸನದಲ್ಲಿ ಒಂದೇ ದಿನ 21 ಜನರಲ್ಲಿ ಕೊರೊನಾ : ಮುಂಬೈ, ತಮಿಳುನಾಡು ಕಾಟ
ಮುಂಬೈ ಹಾಗೂ ತಮಿಳುನಾಡಿನಿಂದ ಬಂದ ಜನರಲ್ಲಿ ಒಂದೇ ದಿನ 21 ಕೊರೊನಾ ವೈರಸ್ ಕಾಣಿಸಿಕೊಂಡಿದ್ದು, ಹಾಸನ ಜಿಲ್ಲೆಯ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಮಹಾರಾಷ್ಟ್ರದಿಂದ ಬಂದವರ ಜೊತೆಗೆ ಮೊದಲ ಬಾರಿಗೆ ತಮಿಳುನಾಡಿನಿಂದ ಬಂದ ವ್ಯಕ್ತಿ ಹಾಗೂ ಪತ್ನಿಯಲ್ಲೂ ಸೋಂಕು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 54ಕ್ಕೆ ಏರಿದೆ.
21 ಜನ ಸೋಂಕಿತರಲ್ಲಿ 16 ಜನರು ಚನ್ನರಾಯಪಟ್ಟಣ ತಾಲ್ಲೂಕಿಗೆ ಸೇರಿದವರು, 3 ಜನ ಹಾಸನ ತಾಲ್ಲೂಕಿನವರು ಮತ್ತು ಇಬ್ಬರು ಹೊಳೆನರಸೀಪುರ ತಾಲ್ಲೂಕಿನವರಾಗಿದ್ದಾರೆ. ಈ ಇಪ್ಪತ್ತೊಂದು ಸೋಂಕಿತರಲ್ಲಿ 19 ಪ್ರಕರಣಗಳು ಮುಂಬೈ ಮೂಲದಿಂದ ಬಂದವರಲ್ಲಿ ಕಂಡು ಬಂದಿದ್ದು, ಎರಡು ಪ್ರಕರಣಗಳು ತಮಿಳುನಾಡಿನಿಂದ ಬಂದವರಲ್ಲಿ ಕಂಡು ಬಂದಿವೆ.