ಕೊರೊನಾ ಎಫೆಕ್ಟ್; ಜುಬ್ಲಿಯೆಂಟ್ ಕಾರ್ಖಾನೆ ವಿರುದ್ಧ ಶಾಸಕ ಹರ್ಷವರ್ಧನ್ ಕಿಡಿ

ಸೋಮವಾರ, 6 ಏಪ್ರಿಲ್ 2020 (11:03 IST)
ಮೈಸೂರು : ಜುಬ್ಲಿಯೆಂಟ್ ಕಾರ್ಖಾನೆ ಕೊರೊನಾ ನಂಜು ತಟ್ಟಿದ್ದು,  ಕಾರ್ಖಾನೆ ತೆರೆಯಲು ಶಾಸಕರೊಬ್ಬರು ತಡೆಯೊಡ್ಡಿದ್ದಾರೆ.


ಮೈಸೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ನಂಜನಗೂಡು ಶಾಸಕ ಹರ್ಷವರ್ಧನ್ , ಜುಬ್ಲಿಯೆಂಟ್ ಕಾರ್ಖಾನೆ ತೆರೆಯಲು ಬಿಡುವುದಿಲ್ಲ. ಪ್ರಕರಣದ ತನಿಖೆ ಮುಗಿಯಬೇಕು. ತಪಿತಸ್ಥರ ತಲೆದಂಡ ಆಗಬೇಕು. ಅಲ್ಲಿಯವರೆಗೂ ಕಾರ್ಖಾನೆ ತೆರೆಯಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಯಾರದೋ ತಪ್ಪಿಗೆ ನಂಜನಗೂಡಿಗೆ ಸಂಕಷ್ಟ. ಕನಿಷ್ಠ ಅವರ ವಿರುದ್ಧವಾದ್ರೂ ಕ್ರಮ ಆಗಲಿ. ಅಲ್ಲಿಯವರೆಗೂ ಕಾರ್ಖಾನೆ ತೆರೆಯಲು ಬಿಡಲ್ಲ.  ಕಾರ್ಖಾನೆ ಅಂದ್ರೆ ಜನ ಹೆದರುವ ಸ್ಥಿತಿ ಇದೆ. 900 ಜನ ಹೋಮ್ ಕ್ವಾರಂಟೈನ್ ಇದ್ದಾರೆ ಎಂದು ಕಾರ್ಖಾನೆ ವಿರುದ್ಧ ಶಾಸಕ ಹರ್ಷವರ್ಧನ್ ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ