ಜೈಲಿನ ಹಕ್ಕಿಗಳಿಗೂ ತಟ್ಟಿದ ಕೊರೊನಾ ಭೀತಿ

ಸೋಮವಾರ, 30 ಮಾರ್ಚ್ 2020 (19:18 IST)
ಜಾಗತಿಕವಾಗಿ ಸವಾಲಾಗಿರುವ ಕೊರೊನಾ ವೈರಸ್ ಇದೀಗ  ಜೈಲು ಹಕ್ಕಿಗಳನ್ನು ಕಂಗಾಲಾಗಿಸಿದೆ.

ನಮಗೆ ಕೊರೊನಾ ವೈರಸ್ ಇದೆಯೋ ಇಲ್ವೋ ಅನ್ನೋದನ್ನ ತಪಾಸಣೆ ಮಾಡಲೇಬೇಕು. ಹೀಗಂತ ಒತ್ತಾಯಿಸಿ ಖೈದಿಗಳು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.

ಪರಪ್ಪನ ಅಗ್ರಹಾರದಲ್ಲಿರುವ ಖೈದಿಗಳು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದು, ಅಗತ್ಯಕ್ಕಿಂತ ಹೆಚ್ಚು ಜನರನ್ನು ಒಂದೇ ಬ್ಯಾರಕ್ ನಲ್ಲಿ ಇರಿಸಲಾಗಿದೆ. ಬೇರೆ ಕಡೆ ಕೆಲವರನ್ನು ಕಳಿಸಬೇಕು ಅಲ್ಲದೇ ಆರೋಗ್ಯ ತಪಾಸಣೆ ನಡೆಸಬೇಕು ಎಂದು ಖೈದಿಗಳು ಒತ್ತಾಯ ಮಾಡುತ್ತಿದ್ದಾರೆ ಎನ್ನಲಾಗ್ತಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ