ಬೆಂಗಳೂರು : ಬಿಎಂಟಿಸಿ ಮನವಿಯ ಹಿನ್ನೆಲೆಯಲ್ಲಿ ಮಾಗಡಿ ರಸ್ತೆ, ತುಮಕೂರು ರಸ್ತೆ, ಬಳ್ಳಾರಿ ರಸ್ತೆ ಹಾಗೂ ಕನಕಪುರ ರಸ್ತೆಗಳಲ್ಲಿ ಬಸ್ ಲೈನ್ ನಿರ್ಮಾಣವಾಗಲಿದೆ. ನಗರದಲ್ಲಿ ವಾಹನ ದಟ್ಟಣೆಯನ್ನು ತಗ್ಗಿಸಲು 9 ಸ್ಥಲಗಳಲ್ಲಿ ವಿದೇಶಿ ಮಾದರಿಯಲ್ಲಿ ಬಸ್ ಲೈನ್ ನಿರ್ಮಿಸಲು ಬಿಬಿಎಂಪಿ ಮುಂದಾಗಿದೆ. ರಸ್ತೆಯ 3.5 ಮೀಟರ್ ಅಗಲ ಸ್ಥಳವನ್ನು ಬಸ್ ಗಳಿಗಾಗಿಯೇ ಮೀಸಲಿಡುವುದು ಯೋಜನೆಯ ಉದ್ದೇಶವಾಗಿದೆ. ಇತರೆ ವಾಹನಗಳ ನುಸುಳುವಿಕೆ ತಡೆಯಲು ಫೈಬರ್ ರಿ ಇನ್ಫೋಸ್ಡರ್ ಬಲ್ಲಾರ್ಡ್ ಅಳವಡಿಸಲು ಬಿಬಿಎಂಪಿ ಮುಂದಾಗಿದೆ.
ಖಾಸಗಿ ಏಜೆನ್ಸಿಯಿಂದ ಬಸ್ ಲೈನ್ ವಿನ್ಯಾಸ ಸಿದ್ದಪಡಿಸಲಾಗುತ್ತಿದ್ದು, 9 ಕಾರಿಡಾರ್ ಗಳಲ್ಲಿ 83 ಕಿಮೀ ವ್ಯಾಪ್ತಿಯಲ್ಲಿ 280 ಕೋಟಿ ರೂ. ವೆಚ್ಚದಲ್ಲಿ ಬಸ್ ಲೈನ್ ನಿರ್ಮಾಣಕ್ಕೆ ಶೀಘ್ರದಲ್ಲೆ ಟೆಂಡರ್ ಆಹ್ವಾನಿಸಲು ಬಿಬಿಎಂಪಿ ಸಿದ್ದತೆ ನಡೆಸಿದೆ.