ಕಲಾಸಿಪಾಳ್ಯ ಮಾರ್ಕೆಟ್ ನಲ್ಲಿ ರೌಡಿಗಳ ದರ್ಬಾರು

ಶನಿವಾರ, 24 ಜೂನ್ 2023 (19:35 IST)
ಬೆಂಗಳೂರಿನ ಪ್ರಮುಖ ತರಕಾರಿ,ಹಣ್ಣು,ಹೂಗಳ ಮಾರಟ ಸ್ಥಳ.ಮೂಲೆ ಮೂಲೆಗಳಿಂದ ಕಲಾಸಿಪಾಳ್ಯ ಮಾರ್ಕೆಟ್ ಗೆ ರೈತರ ಬೆಳೆಗಳು ಬಂದು ಮಾರಾಟವಾಗುತ್ತೆ.ಆದ್ರೆ ಶ್ರಮಜೀವಿ ರೈತರ ಮೇಲೆ ರೌಡಿಗಳು ತಮ್ಮ ಧರ್ಪ ತೋರಿಸ್ತಿದ್ದಾರೆ. ಮಾರ್ಕೆಟ್ ಗೆ ರೈತರ ಬೇಳೆ ಲಾರಿಯಲ್ಲಿ ಎಂಟ್ರಿಯಾಗ್ಬೇಕು ಅಂದ್ರೆ ಈ ರೌಡಿ ಗ್ಯಾಂಗ್ ನ ಪರ್ಮಿಷನ್ ಬೇಕು.ಇಲ್ಲಿ ಇಡೀ ಮಾರ್ಕೆಟ್ ಅನ್ನು ತನ್ನ ಕಂಟ್ರೋಲ್ ನಲ್ಲಿ ಇಟ್ಕೊಂಡಿರೊ ರೌಡಿ ಅಂದ್ರೆ ಇದೇ ವೇಡಿಯಪ್ಪನ್. ಪ್ರತಿಯೊಂದು ವ್ಯವಹಾರಕ್ಕೂ ವೇಡಿ‌ ಗ್ಯಾಂಗ್ ಮೇಯ್ನ್.ಕೂಲಿ,ಹಮಾಲಿ,ಪಾರ್ಕಿಂಗ್ ಸೇರಿ ಎಲ್ಲದರಲ್ಲೂ ವೇಡಿ ಟೀಂ ನದ್ದೆ ಫೈನಲ್.ತರಕಾರಿ ಮೂಟೆ ಇಳಿಸಲು 10 ರೂ ಇದ್ದದ್ದು ಈಗ 15 ರೂ,ಟೊಮ್ಯಾಟೊ ಬಾಕ್ಸ್ ಇಳಿಸಲು 1 ರೂ ಇದ್ದದ್ದು ಈಗ 4 ರೂ,ಲಾರಿ ಪಾರ್ಕಿಂಗ್ ಗೆ 1500 ರೂ ಫಿಕ್ಸ್.ವೇಡಿ ಪಟಾಲಂ ನ ಸುಮಾರು 30 ಜನರ ಸುಮಾರು 14 ಟೀಂ ಮಾರ್ಕೆಟ್ ನಲ್ಲಿ ಕೆಲ್ಸ ಮಾಡುತ್ತೆ. ಪ್ರತಿ ದಿನ ವೇಡಿಗೆ ತಲುಪೋ ಕಲೆಕ್ಷನ್ ಮೂರರಿಂದ ಐದು ಲಕ್ಷ ರೂಪಾಯಿ. ಇದ್ರಿಂದ ರೈತರಿಗೆ ಸಮಸ್ಯೆಯಗ್ತಿದ್ದು,ಬರೋ ರೈತರ ಸಂಖ್ಯೆ ಕಡಿಮೆಯಾಗಿದೆ.ಹಾಗಾಗಿ ಮಾರ್ಕೆಟ್ ವೇಡಿಯಪ್ಪನ್ ಅಲಿಯಾಸ್ ವೇಡಿ ಸೇರಿ ಅವ್ರ ಟೀಂ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸ್  ಕಮಿಷನರ್ ಗೆ ದೂರು ನೀಡಲಾಗಿದೆ.ತರಕಾರಿ ಮತ್ತು ಹಣ್ಣು ಸಗಟು ವರ್ತಕರ ಸಂಘದ ಕಾರ್ಯದರ್ಶಿ,ಮಾಜಿ ಎಂ ಎಲ್ ಎ ಆರ್ ವಿ ದೇವರಾಜ್ ಕಮಿಷನರ್ ದಯಾನಂದ್ ರನ್ನ ಬೇಟಿಯಾಗಿ ದೂರು ಸಲ್ಲಿಸಿದ್ದಾರೆ.ಈಗಾಗಲೆ ದೂರನ್ನ ಡಿಸಿಪಿ ಲಕ್ಷ್ಮಣ್ ನಿಂಬರಿಗೆ ಗಮನಕ್ಕೆ ಕಮಿಷನರ್ ತಂದಿದ್ದು,ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ