ಕಾಂಗ್ರೆಸ್ ಜೊತೆಗೆ ಸಿಪಿಐ ಚುನಾವಣಾ ಮೈತ್ರಿ ಘೋಷಣೆ
ಕಾಂಗ್ರೆಸ್ ಜೊತೆಗೆ ಸಿಪಿಐ ಚುನಾವಣಾ ಮೈತ್ರಿ ಘೋಷಣೆ ಮಾಡಿದೆ.ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೆವಾಲ ಹಾಗೂ ಸಿಪಿಐಎಂ ಮತ್ತು ಮುಖಂಡರು ಜಂಟಿ ಸುದ್ದಿಗೊಷ್ಠಿ ನಡೆಸಿದರು.ಈ ವೇಳೆ ಮಾತನಡಿದ ಸುರ್ಜೆ ವಾಲ ಸಿಪಿಐ ಹಾಗೂ ಕಾಂಗ್ರೆಸ್ ಸಿದ್ದಾಂತದಲ್ಲಿ ಭಿನ್ನತೆ ಇರಬಹುದು, ಆದರೆ ನಮ್ಮ ಇಬ್ಬರ ಹೋರಾಟ ಬೆಲೆ ಏರಿಕೆ, 40% ಬಿಜೆಪಿ ಭ್ರಷ್ಟಾಚಾರ ವಿರುದ್ಧ.ಸಿಪಿಐ ಅಭ್ಯರ್ಥಿಗಳು 7 ಕಡೆ ಸ್ಪರ್ಧೆ ಮಾಡುತ್ತಿದ್ದಾರೆ. ಇದನ್ನ ಹೊರತು ಪಡಿಸಿ 215 ಕಡೆ ನಮಗೆ ಬೆಂಬಲ ಸೂಚಿಸಿದ್ದಾರೆ.ಕಾಂಗ್ರೆಸ್ ಗೆ ಸಿಪಿಐ 215 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಂಬಲ ಕೊಡ್ತಿದೆ.ಕಾಂಗ್ರೆಸ್ ಗೆ ಇದೊಂದು ಐತಿಹಾಸಿಕ ದಿನ ಎಂದು ಹೇಳಿದರು. ಇನ್ನೂ ರಾಜ್ಯ ಸಿಪಿಐ ಕಾರ್ಯದರ್ಶಿ ಸಾತಿ ಸುಂದರೇಶ್ ಮಾತನಾಡಿ ಬೆಂಬಲ ಸೂಚಿಸಿದರು.