ರೀಲ್ಸ್‌ಗಾಗಿ ಹುಚ್ಚಾಟ...ಆವುಲಬೆಟ್ಟದ ವ್ಯೂ ಪಾಯಿಂಟ್‌ ಏರಿದ ಯುವಕನಿಂದಲೇ ಕ್ಷಮೆ ಕೇಳಿಸಿದ ಖಾಕಿ

Sampriya

ಮಂಗಳವಾರ, 10 ಸೆಪ್ಟಂಬರ್ 2024 (16:46 IST)
Photo Courtesy X
ಚಿಕ್ಕಬಳ್ಳಾಪುರ: ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೀಕ್ಷಣೆ ಪಡುವ ಸಲುವಾಗಿ ತಾಲ್ಲೂಕಿನ ಆವುಲಬೆಟ್ಟದ ವ್ಯೂ ಪಾಯಿಂಟ್‌ನಲ್ಲಿ ಅಪಾಯಕಾರಿ ಸ್ಥಳದಲ್ಲಿ ರೀಲ್ಸ್ ಮಾಡಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು, ಎಚ್ಚರಿಕೆ ನೀಡಿದ್ದಾರೆ.

ಅಕ್ಷಯ್ ಕುಮಾರ್ ಎಂಬಾತ ಆವುಲಬೆಟ್ಟದ ವ್ಯೂ ಪಾಯಿಂಟ್‌ನಿಂದ ಅಪಾಯಕಾರಿ ಸ್ಥಳದಲ್ಲಿ ರೀಲ್ಸ್ ಮಾಡಿ, ಅದನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾನೆ.

ಈ ವಿಚಾರ ಪೊಲೀಸರಿಗೆ ತಿಳಿಯುತ್ತಿದ್ದ ಹಾಗೇ ಆತನನ್ನು ವಶಕ್ಕೆ ಪಡೆದು ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಆತನಿಂದಲೇ ವಿಡಿಯೊ ಮಾಡಿಸಿ ಇನ್ನು ಮುಂದೆ ಯಾರೂ ಈ ರೀತಿಯಲ್ಲಿ ಹುಚ್ಚಾಟದ ಸಾಹಸಗಳನ್ನು ಮಾಡಬಾರದು ಎಂದು ಕಿವಿಮಾತು ಹೇಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಪ್ರತಿಕ್ರಿಯಿಸಿ,  ಪ್ರವಾಸಿ ತಾಣಗಳಲ್ಲಿ ಹೀಗೆ ಅಪಾಯಕಾರಿಯಾದ ರೀತಿಯಲ್ಲಿ ರೀಲ್ಸ್ ಮಾಡುವುದು ಸರಿಯಲ್ಲ. ಇಂತಹ ಪ್ರಕರಣಗಳು ಕಂಡು ಬಂದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಪ್ರಕರಣ ದಾಖಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ