ಕಾಂಕ್ರೀಟ್ ರಸ್ತೆಯಲ್ಲಿ ಇಂದ್ರಲೋಕ ಸೃಷ್ಟಿ...!

ಶುಕ್ರವಾರ, 18 ನವೆಂಬರ್ 2022 (18:50 IST)
ಬೆಂಗಳೂರಿನಂತಹ ಕಾಂಕ್ರಿಟ್ ಸಿಟಿಯಲ್ಲಿ ಇಂದ್ರಲೋಕವನ್ನೆ ಸೃಷ್ಟಿಸಿದೆ ಈ ಪಿಂಕ್ ಟಬುಬಿಯಾ ಹೂ . ಅದರಲ್ಲಂತೂ ಕಬ್ಬನ್ ಪಾರ್ಕ್ ನಲ್ಲಿ ಈ ಪಿಂಕ್ ಹೂಗಳು ದಾರಿ  ಹೋಕರನ್ನು ಕೈಬೀಸಿ ಕರಿತಾ ಇದೆ. ಹೌದು ಈ ದೃಷ್ಯ ಕಂಡು ಬಂದಿದ್ದು ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ , ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ತನ್ನ ಕಂಪನ್ನು ಬೀರುವ ಈ ಹೂ, ಬಿಗೋನಿಯೇಸಿ ಕುಟುಂಬದಲ್ಲಿ ಒಂದು ಬಗೆ .    ಇದ್ರಲ್ಲಿ ಟಬುಬಿಯಾ ರೋಸಿಯಾ, ಟಬುಬಿಯಾ ಬ್ಲೂ ಎಂಬ ಹಲವು ಬಗೆಯ 90 ಕ್ಕೂ ಹೆಚ್ಚು ತಳಿಗಳಿವೆ. ಈ ಸುಮ ಮೊದಲು ಹೆಚ್ಚಾಗಿ ಕಂಡು ಬಂದಿದ್ದು ಕ್ಯೂಬಾದಲ್ಲಿ. ಮೆಕ್ಸಿಕೊ, ಕೆರಿಬಿಯನ್, ಅರ್ಜೆಂಟೀನಾ, ಅಮೆರಿಕ ಸೇರಿದಂತೆ ಉಷ್ಣವಲಯ ಪ್ರದೇಶಗಳಲ್ಲಿ ಆದರೆ ಈಗ ಈ ಹೂ ಗಳು ಇಡೀ ಕಬ್ಬನ್ ಪಾರ್ಕ್ನ್ನು ಆವರಿಸಿದೆ.  ಇನ್ನು ಇಲ್ಲಿಗೆ ಬರುವ ಪ್ರವಾಸಿಗರೂ ಕೂಡ ಸಂತಸ ವ್ಯಕ್ತಪಡಿಸಿತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ