ದರ್ಶನ್ ಫೋಟೊ ತೆಗೆದವರ ವಿರುದ್ಧ ಕ್ರಿಮಿನಲ್ ಕೇಸ್: ಮುನಿರತ್ನ
ಬೆಂಗಳೂರು: ಕುರುಕ್ಷೇತ್ರ ಸೆಟ್ ನಲ್ಲಿ ನಟ ದರ್ಶನ್ ಜತೆಯಿದ್ದ ನಟಿ ಪವಿತ್ರ ಗೌಡ ಫೋಟೊ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ನಮ್ಮ ಅನುಮತಿ ಇಲ್ಲದೆ ಚಿತ್ರದ ಸೆಟ್ ಗೆ ಬಂದು ಯಾರೊ ಫೋಟೋ ತೆಗೆದಿದ್ದಾರೆ ಎಂದು ನಿರ್ಮಾಪಕ ಮುನಿರತ್ನ ಹೇಳಿದ್ದಾರೆ.
ಇನ್ನು ಹೈದರಾಬಾದ್ ನಲ್ಲಿರುವ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಭರ್ಜರಿ ಸೆಟ್ ನಲ್ಲಿ ಕುರುಕ್ಷೇತ್ರ ಸಿನಿಮಾದ ಶೂಟಿಂಗ್ ನಡೀತಿದೆ. ಈ ವೇಳೆ ಪವಿತ್ರ ಗೌಡ, ದರ್ಶನ್ ಜತೆ ಮಾತುಕತೆ ನಡೆಸುತ್ತಿರುವ ಫೋಟೊ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿತ್ತು.