ಮದುವೆಯಾಗಲು ಬ್ಯಾಂಕ್​ನಲ್ಲಿ ಕೋಟ್ಯಂತರ ರೂ. ಕಳ್ಳತನ ಮಾಡಿದ್ದ ಆರೋಪಿಗಳು ಅರೆಸ್ಟ್!

ಸೋಮವಾರ, 14 ಮಾರ್ಚ್ 2022 (20:51 IST)
ಬ್ಯಾಂಕ್ ಸಿಬ್ಬಂದಿ ಬಸವರಾಜ ಗೆಳೆಯರೊಂದಿಗೆ ಸೇರಿಕೊಂಡು ಕಳ್ಳತನ ಮಾಡಿದ್ದಾರೆ. ಅದ್ಧೂರಿಯಾಗಿ ಮದುವೆಯಾಗಲು ಕಳ್ಳತನ ಮಾಡಿದ್ದ. ನಂತರ ಕದ್ದ ಹಣ ಹಾಗೂ ಚಿನ್ನಾಭರಣವನ್ನು ಕಬ್ಬಿನ ಗದ್ದೆಯಲ್ಲಿ ಹೂತಿಟ್ಟಿದ್ದ.ಕೋಟ್ಯಂತರ ರೂಪಾಯಿ ಕಳ್ಳತನ (Theft) ಮಾಡಿದ್ದ ಆರೋಪಿಗಳನ್ನು ಮುರಗೋಡ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದಲ್ಲಿ ಬಸವರಾಜ ಹುಣಶಿಕಟ್ಟಿ(30), ಸಂತೋಷ ಕಂಬಾರ(31), ಗಿರೀಶ್ ಬೆಳವಲ(26) ಎಂಬುವವರನ್ನು ಬಂಧಿಸಲಾಗಿದೆ. ಬಂಧಿತರಿಂದ 4.37 ಕೋಟಿ, 1.63 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಆರೋಪಿಗಳು ಮಾ.6ರಂದು ಮುರಗೋಡ ಡಿಸಿಸಿ ಬ್ಯಾಂಕ್‌ನಲ್ಲಿ (ಡಿಸಿಸಿ ಬ್ಯಾಂಕ್) ಕಳ್ಳತನ ಮಾಡಿದ್ದರು. ನಕಲಿ ಕೀ ಬಳಸಿ ಬ್ಯಾಂಕ್ ಸಿಬ್ಬಂದಿ ಬಸವರಾಜ ಕಳ್ಳತನ ಮಾಡಿದ್ದಾರೆ.
 
ಬ್ಯಾಂಕ್ ಸಿಬ್ಬಂದಿ ಬಸವರಾಜ ಗೆಳೆಯರೊಂದಿಗೆ ಸೇರಿಕೊಂಡು ಕಳ್ಳತನ ಮಾಡಿದ್ದಾರೆ. ಅದ್ಧೂರಿಯಾಗಿ ಮದುವೆಯಾಗಲು ಕಳ್ಳತನ ಮಾಡಿದ್ದ. ನಂತರ ಕದ್ದ ಹಣ ಹಾಗೂ ಚಿನ್ನಾಭರಣವನ್ನು ಕಬ್ಬಿನ ಗದ್ದೆಯಲ್ಲಿ ಹೂತಿಟ್ಟಿದ್ದ. ಸದ್ಯ ಹಣ, ಚಿನ್ನಾಭರಣವನ್ನು ಮುರಗೋಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.ವೃದ್ಧ ದಂಪತಿಗೆ ಡ್ಯಾಗರ್ನಿಂದ ಇರಿದು ರಾಬರಿಗೆ ಯತ್ನ:
ಬೆಂಗಳೂರು: ವೃದ್ಧ ದಂಪತಿಗೆ ಡ್ಯಾಗರ್ ನಿಂದ ಇರಿದು ರಾಬರಿಗೆ ಯತ್ನಿಸಿದ ಘಟನೆ ಮಾರ್ಚ್ 12ರಂದು ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ನಡೆದಿದೆ. ಏಕಾಂಗಿಯಾಗಿ ವೃದ್ಧೆ ಮನೆಯಲ್ಲಿದ್ದಾಗ ಚಾಕುವಿನಿಂದ ಇರಿದು ಚಿನ್ನಾಭರಣ ದೋಚಿದ್ದರು. ಚಿನ್ನಾಭರಣ ದೋಚಿ ಹೊರ ಬರುವಾಗ ವೃದ್ಧ ಮನೆಗೆ ಬಂದಿದ್ದರು. ಈ ವೇಳೆ ಆರೋಪಿ ಷಣ್ಮುಗನನ್ನು ವೃದ್ಧ ಹಿಡಿದುಕೊಂಡಿದ್ದರು. ಈ ವೇಳೆ ಆರೋಪಿ ಷಣ್ಮುಗಂ ವೃದ್ಧನ ಬೆನ್ನಿಗೂ ಡ್ಯಾಗರ್ನಿಂದ ಇದ್ದಿದ್ದ. ಬಳಿಕ ಸ್ಥಳೀಯರು ಬಂದು ಆರೋಪಿಯನ್ನು ಹಿಡಿದರು. ನಂತರ ಪೊಲೀಸರಿಗೆ ಒಪ್ಪಿಸಿದ್ದರು.
 
ಲಕ್ಷ್ಮೀ(63), ರಾಮಾನುಜಾಚಾರ್ಯ(65)ಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆ ಠಾಣಾ ಪ್ರಕರಣ ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ