ಪಾಕಿಸ್ತಾನದಲ್ಲಿ ಇಲ್ಲದೇ ಇರೋದನ್ನೂ ಇಲ್ಲಿ ಕೊಡ್ತಾರೆ: ಮುಸ್ಲಿಂ ಮೀಸಲಾತಿ ಬಗ್ಗೆ ಸಿಟಿ ರವಿ ಪ್ರತಿಕ್ರಿಯೆ

Krishnaveni K

ಮಂಗಳವಾರ, 12 ನವೆಂಬರ್ 2024 (13:37 IST)
ಬೆಂಗಳೂರು: ಸಿವಿಲ್ ಗುತ್ತಿಗೆ ಕಾಮಗಾರಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಸಿದ್ದರಾಮಯ್ಯ ಸರ್ಕಾರದ ನಿರ್ಧಾರದ ಬಗ್ಗೆ ಬಿಜೆಪಿ ಎಂಎಲ್ ಸಿ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ.

ಸಂವಿಧಾನ ರಚನೆ ಮಾಡುವಾಗ ನಡೆದ ಸಭೆಯಲ್ಲಿ ಮೀಸಲಾತಿ ಯಾರಿಗೆ ಕೊಡಬೇಕು, ಕೊಡಬಾರದು ಎಂಬ ಬಗ್ಗೆ ಚರ್ಚೆ ನಡೆದಿದೆ. ನಮ್ಮ ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕೊಡಬೇಕು ಎಂಬುದು ಸಂವಿಧಾನದಲ್ಲಿದೆ. ಆದರೆ ಮತಾಧಾರಿತವಾಗಿ ಮೀಸಲಾತಿ ಕೊಡಬಾರದು ಎಂದಿದೆ.

ಮತಾಧಾರಿತವಾಗಿ ಮೀಸಲಾತಿ ಕೊಡುವುದು ಸಂವಿಧಾನಕ್ಕೆ ವಿರುದ್ಧವಾಗಿದೆ. ಬಹುಶಃ ಪಾಕಿಸ್ತಾನದಲ್ಲೂ ಇಲ್ಲದೇ ಇರುವಂತದ್ದನ್ನು ಕಾಂಗ್ರೆಸ್ ಇಲ್ಲಿ ಕೊಡುತ್ತಿದೆ. ಕಾಂಗ್ರೆಸ್ ಒಂದು ಪಾಕಿಸ್ತಾನವನ್ನು ರಚಿಸಿದ್ದು ಸಾಲದು ಎಂದು ಇಲ್ಲೂ ಅಪಚಾರ ಬಗೆಯುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಗೆ ಸಂವಿಧಾನದ ಮೇಲೆ ನಂಬಿಕೆಯಿಲ್ಲ. ಸಂವಿಧಾನದ ಮೇಲೆ ಷರಿಯಾ ಕಾನೂನನ್ನು ಹೇರಲು ಹೊರಟಿದೆ.

ಹೀಗಾಗಿ ಸಂವಿಧಾನವನ್ನು ಬೆಂಬಲಿಸುವ ಎಲ್ಲರೂ ಈ ಷರಿಯಾ ಬೆಂಬಲಿಸುವ ನೀತಿ ವಿರುದ್ಧ ಒಂದಾಗಬೇಕು ಎಂದು ನಾನು ವಿನಂತಿ ಮಾಡುತ್ತೇನೆ ಎಂದು ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಪಚುನಾವಣೆ ಹೊಸ್ತಿಲಲ್ಲೇ ಸಿಎಂ ಸಿದ್ದರಾಮಯ್ಯ ಸಿವಿಲ್ ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ನೀಡಿರುವ ಪ್ರಸ್ತಾವನೆಗೆ ಒಪ್ಪಿಗೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ