ಸಿವಿಸಿ ಹೆಗಲಿಗೆ ಸಿಬಿಐ ಅಧಿಕಾರಿಯ ಕರ್ಮಕಾಂಡದ ತನಿಖೆ ಹೊಣೆ

ಶುಕ್ರವಾರ, 26 ಅಕ್ಟೋಬರ್ 2018 (19:44 IST)
ಸಿಬಿಐ ಅಧಿಕಾರಿಗಳ ಕರ್ಮಕಾಂಡದ ತನಿಖೆಯ ಹೊಣೆಯನ್ನು ಸಿವಿಸಿಗೆ ವಹಿಸಲಾಗಿದೆ.

ಭ್ರಷ್ಟಾಚಾರ ಆರೋಪದ ಮೇಲೆ ಕಡ್ಡಾಯ ರಜೆಯ ಮೇಲಿರುವ ಸಿಬಿಐ ಮುಖ್ಯಸ್ಥ ಅಲೋಕ ವರ್ಮಾ ವಿರುದ್ಧ ಕೇಳಿ ಬಂದಿರುವ ಆರೋಪಗಳ ಕುರಿತು ಎರಡು ವಾರಗಳಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಕೇಂದ್ರಿಯ ವಿಚಕ್ಷಣಾ ಆಯೋಗಕ್ಕೆ ಸುಪ್ರೀಂಕೋರ್ಟ ಸೂಚನೆ ನೀಡಿದೆ.

ಸಿಬಿಐ ಹಂಗಾಮಿ ನಿರ್ದೇಶಕರಾಗಿರುವ ಎಂ.ನಾಗೇಶ್ವರರಾವ್, ತಮ್ಮ ಅವಧಿಯಲ್ಲಿ ಯಾವುದೇ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳಕೂಡದು. ಸಿಬಿಐನ ಆಡಳಿತ ವ್ಯವಸ್ಥೆಯನ್ನು ಮಾತ್ರ ನೋಡಿಕೊಳ್ಳುವಂತೆ ಸುಪ್ರೀಂ ಕೋರ್ಟ ತಿಳಿಸಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ