ಬೆಂಗಳೂರಿನ ಮಕ್ಕಳಲ್ಲಿ ಹೆಚ್ಚಾದ ಸೈಬರ್ ಬುಲ್ಲಿಂಗ್
ಸೈಬರ್ ಬುಲ್ಲಿಂಗ್ ರಾಜಧಾನಿಯ ಮಕ್ಕಳಲ್ಲಿಯೂ ಶುರುವಾಗಿದೆ. ರಾಜಧಾನಿಯ ಚಾಮರಾಜಪೇಟೆಯ ಖಾಸಗಿ ಶಾಲೆಯ 9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಜಗಳವಾಡಿ ಕೋಪದಲ್ಲಿ ತನ್ನ ಸ್ನೇಹಿತನ ಫೋಟೋ ಮಾರ್ಪ್ ಮಾಡಿ ಬುಲ್ಲಿಂಗ್ ಮಾಡಿದ್ದ ಎಂಬ ಬಗ್ಗೆ ದೂರು ಕೇಳಿ ಬಂದಿತ್ತು. ಮಕ್ಕಳು ಈಗ ಇತಂಹ ಸಾಮಾಜಿಕ ಜಾಲತಾಣಗಳ ಗೀಳಿನಿಂದ ತಂತ್ರಜ್ಞಾನದ ಬಳಕೆಯಿಂದ ಅಡ್ಡ ಹಾದಿ ಹಿಡಿದಿದ್ದಾರೆ ಅಂತಾ ಮೂಲಗಳು ಹೇಳಿವೆ.