ಶಾಲಾ ವಾರ್ಷಿಕೋತ್ಸವದಲ್ಲಿ ಅಪ್ಪನ ನೃತ್ಯ
ಈಗೇನಿದ್ದರೂ ಎಲ್ಲೆಡೆ ಶಾಲಾ ವಾರ್ಷಿಕೋತ್ಸವದ ಸಂಭ್ರಮ. ಮಕ್ಕಳನ್ನು ವೇದಿಕೆಯ ಮೇಲೆ ನೋಡಲು ತಂದೆತಾಯಿಗಳು ಅದೆಷ್ಟು ಕಾತರರಾಗಿ ಕಾಯುತ್ತಿರುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತೆ ಇದೆ. ಈ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವೇದಿಕೆಯ ಮೇಲೆ ಮಗಳು ನರ್ತಿಸುತ್ತಿದ್ದರೆ, ಪ್ರೇಕ್ಷಕರ ಸಾಲಿನಲ್ಲಿ ಕುಳಿತ ಅಪ್ಪ ಮಗಳಿಗೆ ನರ್ತಿಸಲು ಪ್ರೋತ್ಸಾಹಿಸುತ್ತಿದ್ದಾರೆ. ಮಕ್ಕಳೊಂದಿಗೆ ಮಕ್ಕಳಾಗಿದ್ದರೆ ಮಾತ್ರ ಮಕ್ಕಳು ಏನನ್ನಾದರೂ ಕಲಿಯುವುದು. ಅದರಲ್ಲೂ ಆರಂಭದ ವರ್ಷಗಳಲ್ಲಂತೂ ಪ್ರತೀ ಹಂತದಲ್ಲಿಯೂ ಅವರೊಂದಿಗೆ ಹೆಜ್ಜೆ ಹಾಕಲೇಬೇಕು. ಇದೀಗ ವೈರಲ್ ಆಗಿರುವ ಈ ವಿಡಿಯೋ ಬಹಳಷ್ಟು ಪ್ರೇಕ್ಷಕರ ಮನಗೆದ್ದಿದೆ.