ಮನೆ ಬಿಟ್ಟು ಹೋದ ಮಗಳು: ಮನನೊಂದ ಕುಟುಂಬದಿಂದ ಮೂವರು ಆತ್ಮಹತ್ಯೆಗೆ ಶರಣು

Sampriya

ಶನಿವಾರ, 24 ಮೇ 2025 (17:47 IST)
ಮೈಸೂರು: ತಮ್ಮ ಹಿರಿಯ ಮಗಳು ಮನೆ ಬಿಟ್ಟು ಹೋಗಿದ್ದರಿಂದ ನೊಂದ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದವರನ್ನು ಎಚ್ ಡಿ ಕೋಟೆ ತಾಲೂಕಿನ ಬೂದನೂರಿನ ಮಹದೇವಸ್ವಾಮಿ, ಪತ್ನಿ ಮಂಜುಳಾ, ಕಿರಿಯ ಮಗಳು ಸೇರಿ ಕೆರೆಗೆ ಹಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಹದೇವಸ್ವಾಮಿ ಅವರ ಹಿರಿಯ ಮಗಳು ಅರ್ಪಿತಾ ಮನೆ ಬಿಟ್ಟು ಹೋಗಿದ್ದರಿಂದ ಮನನೊಂದು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಬೂದನೂರು ಕೆರೆಯ ಏರಿಯ ಮೇಲೆ ಬೈಕ್ ಹಾಗೂ ಮೂವರ ಚಪ್ಪಲಿ ಪತ್ತೆಯಾಗಿದೆ. ನಾಪತ್ತೆಯಾಗಿರುವ ಮೂವರಿಗಾಗಿ ಇದೀಗ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಹೆಚ್ ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ