ತಂದೆಯ ವಿರುದ್ಧ ದೂರು ನೀಡಿದ ಹೆಣ್ಣು ಮಕ್ಕಳು. ಕಾರಣವೇನು ಗೊತ್ತಾ?

ಶನಿವಾರ, 9 ಮಾರ್ಚ್ 2019 (06:52 IST)
ಬೆಳಗಾವಿ : ಗಂಡು ಮಗು ಬೇಕೆಂದು ತಾಯಿ ಹಾಗೂ ಹೆಣ್ಣು ಮಕ್ಕಳಿಗೆ ಹಿಂಸೆ ನೀಡುತ್ತಿದ್ದ ಹಿನ್ನಲೆಯಲ್ಲಿ ತಂದೆಯ ವಿರುದ್ಧವೇ  ಹೆಣ್ಣು ಮಕ್ಕಳು ಪೊಲೀಸರಿಗೆ ದೂರು ನೀಡಿದ್ದಾರೆ.


ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ನಿವಾಸಿ ಬಾಳಗೌಡ ಪಾಟೀಲ್ ಎಂಬಾತ ಕಳೆದ 25 ವರ್ಷಗಳ ಹಿಂದೆ ಅಕ್ಕಮಹಾದೇವಿ ಎಂಬವರನ್ನು ಮದುವೆಯಾಗಿದ್ದು, ಇವರಿಗೆ 3 ಜನ ಹೆಣ್ಣು ಮಕ್ಕಳು, ಹಾಗೂ ಓರ್ವ ಪುತ್ರ ಜನಿಸಿದ್ದನು. ಆದರೆ ಗಂಡು ಮಗು ಸಾವನಪ್ಪಿದ ಹಿನ್ನಲೆಯಲ್ಲಿ ಹೆಂಡತಿಗೆ ಗಂಡು ಮಗು ಹೆತ್ತುಕೊಡುವಂತೆ ಹಿಂಸೆ ನೀಡುತ್ತಿದ್ದನು. ಅಷ್ಟೇ ಅಲ್ಲದೇ ಮತ್ತೊಂದು ಮದುವೆಯಾಗಿ ಮಕ್ಕಳಿಗೆ ಕೊಡಬಾರದ ಕಷ್ಟ ಕೊಟ್ಟು ಮನೆಯಿಂದ ಹೊರ ಹಾಕಿದ್ದಾನೆ.ಇದರಿಂದ ಕೋಪಗೊಂಡ ಹೆಣ್ಣುಮಕ್ಕಳು ಅಪ್ಪನ ವಿರುದ್ಧ ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾಕತಿ ಗ್ರಾಮಸ್ಥರು ಈ ಮಕ್ಕಳ ನೆರವಿಗೆ ನಿಂತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ