ಡೇಟಿಂಗ್ ಗೆ ಸಮಸ್ಯೆಯಾಗ್ತಿದೆ ಎಂದು ಮಗುವನ್ನೇ ಮಾರಿದ ಮಹಾತಾಯಿ

ಶನಿವಾರ, 9 ಮಾರ್ಚ್ 2019 (06:38 IST)
ರಷ್ಯಾ : ತಾಯಿಯಾದವಳು ತಾನು ಹೆತ್ತ ಮಗುವಿಗಾಗಿ ತನ್ನ ಇಡೀ ಜೀವನವನ್ನೇ ಮುಡಿಪಾಗಿಡುತ್ತಾಳೆ. ಆದರೆ ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ತಾಯಿಯೊಬ್ಬಳು ಡೇಟಿಂಗ್ ಗೆ ಸಮಸ್ಯೆಯಾಗ್ತಿದೆ ಎನ್ನುವ ಕಾರಣಕ್ಕೆ 7 ದಿನದ ತನ್ನ ಮಗುವನ್ನು ಮಾರಾಟ ಮಾಡಿದ್ದಾಳೆ.


23 ವರ್ಷ ವಯಸ್ಸಿನ ಈ ತಾಯಿ ಐದು ತಿಂಗಳ ಹಿಂದೆ ಒಂದು ವರ್ಷದ ಮಗುವನ್ನು ಮಹಿಳೆ ಮಾರಾಟ ಮಾಡುವ ಸಲುವಾಗಿ ಜಾಹೀರಾತು ನೀಡಿದ್ದಳಂತೆ. ಈ ವಿಚಾರ ತಿಳಿದ ಪೊಲೀಸರು ಮಾರುವೇಷದಲ್ಲಿ ಬಂದು ಮಹಿಳೆಗೆ ಎಚ್ಚರಿಕೆ ನೀಡಿದ್ದರಂತೆ. ಆದರೆ ಇದೀಗ ಡೇಟಿಂಗ್ ಗೆ ಸಮಸ್ಯೆಯಾಗ್ತಿದೆ ಎನ್ನುವ ಕಾರಣಕ್ಕೆ ಹುಟ್ಟಿ 7 ದಿನವಾಗಿರುವ ಮಗುವನ್ನು ಕೂಡ ತಾಯಿ ಮಾರಾಟ ಮಾಡಿದ್ದಾಳೆ.


ಮಗು ಮಾರಾಟ ಮಾಡಿ ಹಣ ಪಡೆಯುತ್ತಿದ್ದ ವೇಳೆ ಆರೋಪಿತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಒಂದು ವೇಳೆ ಮಹಿಳೆ ಆರೋಪ ಸಾಬೀತಾದ್ರೆ 5 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ