ಜಿ.ಟಿ ದೇವೇಗೌಡರು ಬಿಜೆಪಿಗೆ ಬರೋದಾದ್ರೆ ಸ್ವಾಗತ ಎಂದ ಡಿಸಿಎಂ ಗೋವಿಂದ ಕಾರಜೋಳ

ಭಾನುವಾರ, 15 ಸೆಪ್ಟಂಬರ್ 2019 (10:21 IST)
ಬಾಗಲಕೋಟೆ : ಜೆಡಿಎಸ್​​​​ ಶಾಸಕ ಜಿ.ಟಿ ದೇವೇಗೌಡರು ಬಿಜೆಪಿಗೆ ಬರೋದಾದ್ರೆ ಸ್ವಾಗತಿಸುತ್ತೇವೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.




ಇಂದು ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು, ಜೆ.ಟಿ ದೇವೇಗೌಡರು ಬಿಜೆಪಿ ಬರೋದು ನನಗೆ ಗೊತ್ತಿಲ್ಲ. ಆದರೆ, ಈ ಬಗ್ಗೆ ಸುಮಾರು ಸಲ ಕೇಳಿದ್ದೇವೆ. ನನ್ನೊಂದಿಗೆ ಈ ಬಗ್ಗೆ ಯಾರೂ ಮಾತನಾಡಿಲ್ಲ. ಪಕ್ಷ ಸೇರೋದಾದ್ರೆ ಸೇರಬಹುದು. ಬಿಜೆಪಿ ನಿಂತ ನೀರಲ್ಲ, ಹರಿಯುವ ನೀರು. ಹೀಗಾಗಿ ಯಾರೇ ಆಗಲಿ ಪಕ್ಷದ ತತ್ವ, ಸಿದ್ದಾಂತ ಒಪ್ಪಿ ಬರುವವರಿಗೆ ಸ್ವಾಗತ ಮಾಡುತ್ತೇವೆ ಎಂದು ಹೇಳಿದ್ದಾರೆ.


ಹೊಸ ಟ್ರಾಫಿಕ್ ರೂಲ್ಸ್ ಬಗ್ಗೆ ಮಾತನಾಡಿದ ಅವರು,  ದುಬಾರಿ ದಂಡಕ್ಕಾದರೂ ಹೆದರಿ ಕಾನೂನು ಪಾಲನೆ ಮಾಡಲಿ ಅನ್ನೋದು ಸರ್ಕಾರದ ಉದ್ದೇಶ. ದಂಡ ಸ್ವಲ್ಪ ಹೆಚ್ಚಾಗಿದೆ ಎಂದು ಎಲ್ಲಾ ರಾಜ್ಯದವರು ಹೇಳುತ್ತಿದ್ದಾರೆ. ದಂಡವನ್ನು ಕೆಲವು ರಾಜ್ಯದವರು ಮಾರ್ಪಾಡು ಮಾಡಿದ್ದಾರೆ. ಈ ಬಗ್ಗೆ ನಮಗೆ ನಿಖರವಾದ ಮಾಹಿತಿ ಸಿಕ್ಕಿಲ್ಲ. ನಾವು ಕೂಡಾ ಪುನರ್ ಪರಿಶೀಲನೆ ಮಾಡೋ ವಿಚಾರದಲ್ಲಿದ್ದೇವೆ. ಆದರೆ, ಕೇಂದ್ರ ಸರ್ಕಾರ ಇಡೀ ದೇಶಕ್ಕೆ ಕಾನೂನು ಜಾರಿಗೆ ತಂದಿದೆ. ಸಾರಿಗೆ ನಿಯಮ ಪಾಲಿಸಬೇಕು, ಅಪಘಾತ ಕಡಿಮೆಯಾಗಬೇಕು ಎಂಬುದು ನಮ್ಮ ಉದ್ದೇಶ ಎಂದು ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ