ರೈತರ ಕಾರಹುಣ್ಣಿಮೆ ಸಂಭ್ರಮ ಕಿತ್ತುಕೊಂಡ ಕೊರೊನಾ

ಗುರುವಾರ, 4 ಜೂನ್ 2020 (19:38 IST)
ಡೆಡ್ಲಿ ಕೊರೊನಾ ವೈರಸ್ ಈ ಬಾರಿಯ ಕಾರಹುಣ್ಣಿಮೆ ಮೇಲೂ ತನ್ನ ಕದಂಬ ಬಾಹು ಚಾಚಿದೆ.

ಕೊರೊನಾ ವೈರಸ್ ನಿಂದಾಗಿ ರೈತರ ಹಬ್ಬ ಎಂದೇ ಕರೆಯಲಾಗುವ ಕಾರಹುಣ್ಣಿಮೆ ಆಚರಣೆಗೆ ಬೆಳೆಗಾರರು ಭಾರೀ ನಿರಾಸಕ್ತಿ ತೋರಿಸುತ್ತಿದ್ದಾರೆ.

ಲಾಕ್ ಡೌನ್ 5.0 ಜಾರಿ ನಡುವೆ ಮಾರುಕಟ್ಟೆಗೆ ತರಹೇವಾರಿ ಬಣ್ಣ ಬಣ್ಣದ ಹಗ್ಗ, ಮಗಡ, ಬಣ್ಣಗಳು, ಬಾರುಕೋಲು, ಜಾನುವಾರು ಕೊರಳಿಗೆ ಹಾಕುವ ಸರಗಳು ಬಂದಿದ್ದರೂ ಕೊಳ್ಳುವವರ ಬರ ಕಾಡಿದೆ.

ಎತ್ತುಗಳನ್ನು ಸಿಂಗರಿಸಲು ಬೇಕಾಗುವ ವಸ್ತುಗಳ ಖರೀದಿಗೂ ರೈತರು ಮುಂದಾಗದೇ ಇರೋದಕ್ಕೆ ಕೊರೊನಾ ವೈರಸ್ ಪರೋಕ್ಷ ಕಾರಣವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ