ವಾಹನ ಚಾಲನಾ ತರಬೇತಿ ಶುಲ್ಕ ಪರಿಷ್ಕರಿಸಿದ ಸಾರಿಗೆ ಇಲಾಖೆ‌

ಶುಕ್ರವಾರ, 15 ಡಿಸೆಂಬರ್ 2023 (14:24 IST)
ಹೊಸ ವರ್ಷಕ್ಕೆ ಜನರನ್ನ ಬೆಲೆ ಏರಿಕೆ ಬಿಸಿ ಬಿಡ್ತಿಲ್ಲ.ಜನವರಿ 1ರಿಂದಲೇ ಹೊಸ ದರ ಪಟ್ಟಿ ಜಾರಿಯಾಗಲಿದ್ದು,ಡ್ರೈವಿಂಗ್ ಸ್ಕೂಲ್ ಫೀಸ್ ಹೆಚ್ಚಳವಾಗುವ ಸಾಧ್ಯತೆ ಇದೆ.ಈಗಾಗಲೇ ಹೊಸ ಪರಿಷ್ಕೃತ ದರ ಪಟ್ಟಿಯನ್ನ ಸಾರಿಗೆ ಇಲಾಖೆ ಪ್ರಕಟಿಸಿದೆ.
 
ಹೊಸ ವರ್ಷಕ್ಕೆ‌ ಡ್ರೈವಿಂಗ್ ಕಲಿತು ಲೈಸೆನ್ಸ್ ಪಡ್ಕೋಳ್ಳೋಣ ಅಂತಿದ್ದವರಿಗೆ ಸಾರಿಗೆ ಇಲಾಖೆ ಶಾಕ್ ಕೊಟ್ಟಿದೆ.ಕಳೆದ ಹತ್ತು ವರ್ಷದಿಂದ ವಾಹನ ಚಾಲನ ತರಬೇತಿ‌ ಶುಲ್ಕ ಪರಿಷ್ಕರಣೆ ಆಗಿಲ್ಲ. ಪೆಟ್ರೋಲ್, ಡೀಸೆಲ್, ವಾಹನ ನಿರ್ವಹಣೆ ವೆಚ್ಚಗಳು ಹೆಚ್ಚಳವಾಗಿರೋ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ  ಸಿ ಮಲ್ಲಿಕಾರ್ಜುನ ಹೇಳಿದ್ದಾರೆ.
 
ಡ್ರೈವಿಂಗ್ ಸ್ಕೂಲ್ ಒಕ್ಕೂಟ ಸಚಿವರ ಬಳಿ ಬೇಡಿಕೆ‌ ಇಟ್ಟಿದ್ದು,ಪ್ರಮುಖವಾಗಿ‌ ಫೀ ಹೆಚ್ಚಳ ಮಾಡೊದಕ್ಕೆ‌ ಮನವಿ‌ಮಾಡಿದ್ರು.ಈ‌ ಸಂಬಂದ ಸಮೀತಿಯನ್ನ ರಚನೆ‌ ಮಾಡಿದ್ದೆವು.ಸಮೀತಿಯಲ್ಲಿ ತಿರ್ಮಾನ ಮಾಡಿ ಫ್ರೀ ಹೆಚ್ಚಳ ಮಾಡಿದ್ದೇವೆ.ಜನವರಿ 1ದರ ರಿಂದ ಹೊಸ‌ ದರ ಅನ್ವಯ ವಾಗಲಿದೆ.ಹೊರ ರಾಜ್ಯಗಳಲ್ಲಿನ ಬೆಲೆಯನ್ನೆಲ್ಲ ಪರೀಶಿಲಿಸಿದ್ದೇವೆ.ಹೊಸ ದರವನ್ನ‌ ಪರಿಷ್ಕರಣೆ ಮಾಡಿದ್ದೇವೆ ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ  ಸಿ ಮಲ್ಲಿಕಾರ್ಜುನ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ