ಫೆ.19ರಂದು ಬೆಳಗ್ಗೆ 10.30ರ ಸುಮಾರಿಗೆ ಮೂವರು ಅಪರಿಚಿತರು ದ್ವಿಚಕ್ರವಾಹನದಲ್ಲಿ ಗಾಂಜಾ ಇರಿಸಿಕೊಂಡು ಮಾರಾಟಕ್ಕೆ ತೆರಳುತ್ತಿರುವ ಬಗ್ಗೆ ಸ್ಥಳೀಯರು ಪೆÇಲೀಸರಿಗೆ ಮಾಹಿತಿ ನೀಡಿದ್ದರು. ದೊರೆತ ಖಚಿತ ಮಾಹಿತಿ ಮೇರೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೆÇಲೀಸರು, ಮಾಲುಸಹಿತ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಮೂವರು ಆರೋಪಿಗಳು ನಗರದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ಸುಲಭವಾಗಿ ಹೆಚ್ಚಿನ ಹಣ ಸಂಪಾದಿಸುವ ಉದ್ದೇಶದಿಂದ ಡ್ರಗ್ಸ್ ಪೆಡ್ಲಿಂಗ್ ದಂಧೆಗೆ ಇಳಿದಿದ್ದರು. ತವರು ರಾಜ್ಯ ತ್ರಿಪುರಾಕ್ಕೆ ಹೋದಾಗ ಕಡಿಮೆ ದರಕ್ಕೆ ಗಾಂಜಾ ಖರೀದಿಸಿ ಬಳಿಕ ಅದನ್ನು ನಗರಕ್ಕೆ ತಂದು ಗಿರಾಕಿಗಳನ್ನು ಹುಡುಕಿ ದುಬಾರಿ ದರಕ್ಕೆ ಮಾರಾಟ ಮಾಡುತ್ತಿದ್ದರು. ಆರೋಪಿಗಳು ಯಾರಿಗೂ ಅನುಮಾಬಾರದ ಹಾಗೆ ಲಗೇಜ್ ಬ್ಯಾಗ್‍ನಲ್ಲಿ ಗಾಂಜಾ ಇರಿಸಿ ರೈಲಿನ ಮೂಲಕ ನಗರಕ್ಕೆ ತರುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.