ಡಿಜಿಪಿ, ಸಿಎಂ, ಪ್ರಧಾನಿ ಮಗಳಾಗಿದ್ದರೂ ಕಾನೂನು ಒಂದೇ: ನಟಿ ರನ್ಯಾ ವಿರುದ್ಧ ಕಟ್ಟುನಿಟ್ಟಿನ ಕ್ರಮ

Sampriya

ಬುಧವಾರ, 5 ಮಾರ್ಚ್ 2025 (17:02 IST)
Photo Courtesy X
ಬೆಂಗಳೂರು: ಕಾನೂನು ಎಲ್ಲರಿಗೂ ಒಂದೇ  ಎಂದು ಬರೋಬ್ಬರಿ 14.8 ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ನಟಿ ರನ್ಯಾರಾವ್‌ ಬಗ್ಗೆ ರಾಜ್ಯ ಸರ್ಕಾರ ಪ್ರತಿಕ್ರಿಯಿಸಿದೆ.

ದುಬೈನಿಂದ ಭಾರತಕ್ಕೆ 14.8 ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ನಟಿಯನ್ನು ಅರೆಸ್ಟ್‌ ಮಾಡಲಾಗಿದೆ. ಈ ಬಗ್ಗೆ ಕಾಂಗ್ರೆಸ್ ಶಾಸಕ ಮತ್ತು ಕರ್ನಾಟಕ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎಎಸ್ ಪೊನ್ನಣ್ಣ ಪ್ರತಿಕ್ರಿಯಿಸಿ, ರನ್ಯಾಳನ್ನು ಇತರ ಆರೋಪಿಗಳಂತೆ ನಡೆಸಿಕೊಳ್ಳಲಾಗುತ್ತಿದೆ ಎಂದರು.

"ಅವಳು ಕಳ್ಳಸಾಗಾಣಿಕೆಯಲ್ಲಿ ತೊಡಗಿರುವ ಆರೋಪಿ, ಅವಳು ಡಿಜಿಪಿ, ಸಿಎಂ ಅಥವಾ ಪ್ರಧಾನಿ ಮಗಳಾಗಿದ್ದರೂ ಕಾನೂನು ತನ್ನ ಮಾರ್ಗವನ್ನು ತೆಗೆದುಕೊಳ್ಳುತ್ತದೆ.. ಇದರಲ್ಲಿ ಯಾವುದೇ ಅಧಿಕೃತ ನಂಟು ಇದ್ದರೆ ತನಿಖೆಯಲ್ಲಿ ಹೊರಬರುತ್ತದೆ" ಎಂದು ಹೇಳಿದರು.

ರನ್ಯಾ ರಾವ್ ಅವರ ಮಲ ತಂದೆ ಕರ್ನಾಟಕದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಡಾ. ಕೆ ರಾಮಚಂದ್ರ ರಾವ್ ಆಗಿದ್ದಾರೆ.

ಆಕೆ ಚಿನ್ನ ಕಳ್ಳಸಾಗಣೆಯಲ್ಲಿ ತೊಡಗಿರುವ ಶಂಕೆಯ ಬಗ್ಗೆ ಸುಳಿವು ಪಡೆದಿದ್ದ ಡಿಆರ್‌ಐ ಅಧಿಕಾರಿಗಳು, ಆಕೆ ಆಗಮನದ ಮುನ್ನ ವಿಮಾನ ನಿಲ್ದಾಣದಲ್ಲಿ ತಂಡವನ್ನು ಬೀಡುಬಿಟ್ಟಿದ್ದರು.

ಆಕೆಯ ವಿಮಾನ ಇಳಿದ ನಂತರ, ಆಕೆಯನ್ನು ಡಿಆರ್‌ಐ ಬಂಧಿಸಿ ಕಸ್ಟಡಿಗೆ ತೆಗೆದುಕೊಂಡಿತು. ಮಾರ್ಚ್ 4, 2025 ರಂದು, ರನ್ಯಾ ಅವರನ್ನು ಹಣಕಾಸಿನ ಅಪರಾಧಗಳಿಗಾಗಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು, ಅಲ್ಲಿ ಅವರನ್ನು ಮಾರ್ಚ್ 18, 2025 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ