ವಜ್ರಮಹೋತ್ಸವ ಸಾಕ್ಷ್ಯಚಿತ್ರಗಳ ಕೋಟಿ ಖರ್ಚು ಲಕ್ಷಕ್ಕೆ ಇಳಿಕೆ..!
ಬೆಂಗಳೂರು: ವಿಧಾನಸೌಧ ವಜ್ರ ಮಹೋತ್ಸವಕ್ಕೆ ಶಾಸಕರಿಗೆ ಬೆಳ್ಳಿ, ಚಿನ್ನದ ಚಿಸ್ಕತ್ ವಿಚಾರ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಮೊಟಕುಗೊಳಿಸಲಾಗಿತ್ತು. 10 ಕೋಟಿ ಮಿತಿಯಲ್ಲಿ ಸಮಾರಂಭ ಮಾಡಲು ಸಿಎಂ ಸೂಚಿಸಿದ್ದರು.
ಇದಕ್ಕೆ ಕೆಲ ನಿರ್ದೇಶಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಜನಸಾಮಾನ್ಯರು ಸಹ ವಿರೋಧ ವ್ಯಕ್ತಪಡಿಸಿದ್ದರು.