ನವದೆಹಲಿಗೆ ನಮ್ಮ ರಾಜ್ಯದ ಈ ಸ್ಥಳದಿಂದ ನೇರ ವಿಮಾನ ಹಾರಾಟ ನಡೆಯಲಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ರಾಷ್ಟ್ರ ರಾಜಧಾನಿ ದೆಹಲಿ ನಡುವೆ ವಿಮಾನ ಹಾರಾಟ ಆರಂಭಿಸಬೇಕು ಎನ್ನುವ ಬಹುದಿನಗಳ ಬೇಡಿಕೆ ಈಡೇರಿಸುವ ಕಾಲ ದೂರವಿಲ್ಲ. ಸ್ಟಾರ್ ಏರ್ ಲೈನ್ಸ್ ಕಂಪನಿಯು ಹುಬ್ಬಳ್ಳಿ-ದೆಹಲಿ ನೇರ ವಿಮಾನ ಸೌಲಭ್ಯ ಒದಗಿಸುವ ಸಿದ್ಧತೆಯಲ್ಲಿದೆ.
ಈ ವಿಷಯದ ಕುರಿತು ಟ್ವೀಟ್ ನಲ್ಲಿ ಹಂಚಿಕೊಂಡಿರುವ ಹುಬ್ಬಳ್ಳಿ ಏರ್ ಪೋರ್ಟ್ ಅಧಿಕಾರಿಗಳು, ಪ್ರಾದೇಶಿಕ ಸಂಪರ್ಕ ಯೋಜನೆ (ಉಡಾನ್) ಯೋಜನೆಯಲ್ಲಿ ಅತ್ಯಂತ ಯಶಸ್ವಿ ವಿಮಾನ ನಿಲ್ದಾಣವಾದ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಶೀಘ್ರವೇ ದೆಹಲಿಯ ಹಿಂಡಾನ್ ಏರ್ ಪೊರ್ಟ್ ಗೆ ವಿಮಾನಯಾನ ಸಂಪರ್ಕ ಕಲ್ಪಿಸಲಿದೆ.
ಇದಕ್ಕಾಗಿ ಸ್ಟಾರ್ ಏರ್ ಲೈನ್ಸ್ ಉತ್ಸುಕತೆ ತೋರಿದೆ ಎಂದು ಬರೆದುಕೊಂಡಿದ್ದಾರೆ. ಆದರೆ, ವಿಮಾನಯಾನ ಯಾವಾಗ ಆರಂಭವಾಗಲಿದೆ, ಅಲ್ಲದೇ ದರ ಎಷ್ಟು ಎಂಬುವುದನ್ನು ಗೌಪ್ಯವಾಗಿ ಇಡಲಾಗಿದೆ.