ಪ್ರೀತಿಗೆ ಅಡ್ಡಿ: ಪೊಲೀಸ್ ಠಾಣೆ ಮೆಟ್ಟಿಲೇರಿದ ಹುಡುಗಿ

ಶುಕ್ರವಾರ, 23 ನವೆಂಬರ್ 2018 (18:51 IST)
ಪ್ರೀತಿಗೆ ಕುಟುಂಬದವರು ಅಡ್ಡಿಪಡಿಸಿದ್ದರಿಂದ ಹುಡುಗಿ ಪೊಲೀಸ್ ಠಾಣೆಯ ಮೆಟ್ಟಿಲನ್ನು ಏರಿದ ಘಟನೆ ನಡೆದಿದೆ.  

ರಾಯಚೂರು ಜಿಲ್ಲೆ ಲಿಂಗಸುಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲವ್ ಮ್ಯಾಟರ್ ಗೆ ಗಲಾಟೆ ನಡೆದಿದೆ.
ಹುಡುಗಿಯ ಕಡೆಯವರಿಂದ ಹುಡುಗನ ಕಡೆಯವರ ಬೈಕ್ ಗೆ ಬೆಂಕಿ ಹಚ್ಚಲಾಗಿದೆ. ಒಂದೇ ಕಮ್ಯೂನಿಟಿಯ ಹುಡುಗ ಹುಡುಗಿ ಪರಸ್ಪರ ಪ್ರೀತಿ ಮಾಡಿದ್ದರು. ಹುಡಿಗಿ ಕಡೆಯವರಿಗೆ ಹುಡುಗ ಇಷ್ಟ ಇರಲಿಲ್ಲ. ಅದಕ್ಕೆ ಹುಡಗನ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಹುಡುಗನ‌ ಕಡೆಯವರ ಮೇಲೆ ಹುಡುಗಿಯ ಮನೆಯವರಿಂದ ಬೈಕ್ ಮತ್ತು ಮನೆಯ ಮೇಲೆ ದಾಳಿ ನಡೆದಿದೆ. ಹೀಗಾಗಿ ಹುಡುಗಿ ಲಿಂಗಸೂರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ