ಎತ್ತರ ನೋಡುವ ನೆಪದಲ್ಲಿ ಹುಡುಗಿಯ ಜತೆ ಅಸಭ್ಯವಾಗಿ ನಡೆದುಕೊಂಡ ಟ್ಯೂಷನ್ ಟೀಚರ್
ಮುಂಬೈನಲ್ಲಿ ಈ ಘಟನೆ ನಡೆದಿದ್ದು ಆರೋಪಿ ಶಿಕ್ಷಕ ರೆಹಾನ್ ಅನ್ಸಾರಿಯನ್ನು ಬಂಧಿಸಲಾಗಿದೆ. ಈತ ಖಾಸಗಿ ಟ್ಯೂಷನ್ ಕೇಂದ್ರವೊಂದನ್ನು ನಡೆಸುತ್ತಿದ್ದ ಎನ್ನಲಾಗಿದೆ.
ತನ್ನ ಟ್ಯೂಷನ್ ಕೇಂದ್ರಕ್ಕೆ ಪಾಠ ಹೇಳಿಸಿಕೊಳ್ಳಲು ಬರುತ್ತಿದ್ದ ಹುಡುಗಿಯನ್ನು ಸಂಜೆ ವೇಳೆ ಮನೆಗೆ ಕರೆಸಿಕೊಂಡ ಈತ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಈ ಸಂದರ್ಭದಲ್ಲಿ ಬಾಲಕಿ ಕಿರುಚಲು ಮುಂದಾದಾಗ ಬಲವಂತವಾಗಿ ಬಾಯಿ ಮುಚ್ಚಿಸಿದ್ದಾನೆ. ಆದರೆ ಅದು ಹೇಗೋ ಆತನಿಂದ ತಪ್ಪಿಸಿಕೊಂಡ ಬಾಲಕಿ ಪೊಲೀಸರಿಗೆ ದೂರು ನೀಡಿದ್ದಾಳೆ.