ಅಕ್ಷಯ ತೃತೀಯ ದಿನದ ಮಹತ್ವ ಏನು ಗೊತ್ತಾ…?

ಮಂಗಳವಾರ, 17 ಏಪ್ರಿಲ್ 2018 (19:36 IST)
ಬೆಂಗಳೂರು:ಅಕ್ಷಯ ತೃತೀಯ ಎಂಬುದು ಹೆಸರೇ ತಿಳಿಸುವಂತೆ ಆ ದಿನ ಕೈಗೊಂಡ ಕಾರ್ಯ ಅಕ್ಷಯ ಆಗುತ್ತದೆಯಂತೆ. ಸಮೃದ್ಧಿಯ ಸಂಕೇತವಾಗಿರುವ ಅಕ್ಷಯ ತೃತೀಯ ದಿನಕ್ಕೆ ಪೌರಾಣಿಕ ಮತ್ತು ಧಾರ್ಮಿಕ ಹಿನ್ನೆಲೆ ಇದೆ. ಈ ದಿನ ಕೈಗೊಳ್ಳುವ ಶುಭಕಾರ್ಯಗಳು ಯಶಸ್ಸು ತಂದುಕೊಡುತ್ತವೆ ಎಂಬ ನಂಬಿಕೆ ಜನರಲ್ಲಿದೆ.

ಈ ದಿನ ನಾವು ಚಿನ್ನ ಖರೀದಿಸುವುದು, ಮತ್ತು ಅಂದು ದೇವತಾ ಕಾರ್ಯಗಳಿಗೆ, ದಾನಗಳಿಗೆ ಬಹಳ ಪ್ರಾಶಸ್ತ್ಯ ನೀಡಬೇಕು. ಎಷ್ಟು ಶ್ರದ್ಧೆ-ಭಕ್ತಿಯಿಂದ ಅವೆಲ್ಲವನ್ನೂ ಮಾಡುತ್ತೀರೋ ಆ ಫಲಗಳು ಅಷ್ಟು ಅಕ್ಷಯ ಆಗುತ್ತವೆಯಂತೆ.


ಬದರಿಯಲ್ಲಿ ಈ ಶುಭದಿನದಂದು ಮಂದಿರದ ದ್ವಾರ ತೆಗೆದು ನಾರಾಯಣನ ಅನುಗ್ರಹಕ್ಕೆ ಪಾತ್ರರಾಗಲು ಅವಕಾಶ ನೀಡುವುದರಿಂದ ಮುಕ್ತಿದ್ವಾರವನ್ನು ತೆಗೆಯುವ ಶುಭತಿಥಿಯೂ ಹೌದು. ಜಗತ್ತಿನ ಶ್ರೇಷ್ಠ ಆಚಾರ್ಯರೆನಿಸಿದ ಶಂಕರ ಭಗವತ್ಪಾದರು, ಭಿಕ್ಷೆಯಲ್ಲಿ ನೆಲ್ಲಿಕಾಯಿ ನೀಡಿದ ಬಡಮಹಿಳೆಗೆ, 'ಕನಕಧಾರಾ' ಸ್ತೋತ್ರ ಪಠಿಸಿ ಚಿನ್ನದ ನೆಲ್ಲಿಕಾಯಿ ಮಳೆಯನ್ನು ತರಿಸಿ, ಆಕೆಯ ಬಡತನ ನಿವಾರಣೆ ಮಾಡಿದ ಅಕ್ಷಯ ತದಿಗೆ ಹಬ್ಬಕ್ಕೆ ಚಿನ್ನದೊಂದಿಗೆ ಭದ್ರ ಬೆಸುಗೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ