ಮದುವೆ ಮನೆಗೆ ಬೆಂಕಿ ಇಟ್ಟ ದುರುಳರಿಗೆ ಆದ ಶಿಕ್ಷೆ ಏನು ಗೊತ್ತಾ?

ಮಂಗಳವಾರ, 3 ಜುಲೈ 2018 (17:33 IST)
ಆ ಕಿರಾತಕರು ದುರುದ್ದೇಶದಿಂದಲೇ ಮದುವೆ ಮನೆಗೆ ಬೆಂಕಿ ಇಟ್ಟಿದ್ದರು. ಹೀಗಾಗಿ ಸಡಗರದಲ್ಲಿರಬೇಕಿದ್ದ ಮದುವೆ ಮನೆಯವರು ನೋವಿನಲ್ಲಿ ಕೈತೊಳೆಯುವ ಹಾಗಾಗಿತ್ತು. ಆದರೆ ನ್ಯಾಯಾಲಯ ನೊಂದವರ ಪರ ತೀರ್ಪು ನೀಡಿದೆ. ಅಷ್ಟೇ ಅಲ್ಲ ಮದುವೆ ಮನೆಗೆ ಬೆಂಕಿ ಇಟ್ಟ ದುರುಳರಿಗೆ ತಕ್ಷ ಶಿಕ್ಷೆಯನ್ನೂ ಪ್ರಕಟಿಸಿದೆ. 
 
ಮದುವೆ ಮನೆಗೆ ಬೆಂಕಿಇಟ್ಟ ದುರುಳರಿಗೆ ಕುಂದಾಪುರದ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 2015ರಲ್ಲಿ ಬೈಂದೂರು ತೆಗ್ಗರ್ಸೆಯ ಅರಳಿಕಟ್ಟೆಯಲ್ಲಿ ಮದುವೆ ಮನೆಗೆ ರಾಜೇಶ ಶೆಟ್ಟಿ(35), ರಾಘವೇಂದ್ರ ಶೆಟ್ಟಿ (33) ಬೆಂಕಿ ಇಟ್ಟಿದ್ದರು. ದ್ವೇಷದ ಹಿನ್ನೆಲೆಯಲ್ಲಿ ಚಿಕ್ಕಮ್ಮನ ಮನೆಗೆ ಬೆಂಕಿ ಇಟ್ಟಿದ್ದರು.

ಸುಶೀಲ್ ಶೆಟ್ಟಿ ಎಂಬುವರಿಗೆ ಸೇರಿದ ಮನೆ ಅದಾಗಿತ್ತು. ಮನೆ ಮಂದಿ ಮದುವೆ ಸಮಾರಂಭಕ್ಕೆ ತೆರಳಿದ್ದರು. ಆಗ ಅಕ್ರಮ ಪ್ರವೇಶ ಮಾಡಿ ವಸ್ತುಗಳಿಗೆ ಹಾನಿ ಮಾಡಿದ್ದಲ್ಲದೇ ಸೀಮೆ ಎಣ್ಣೆ ಸುರಿದು ಮನೆಗೆ ಅಪರಾಧಿಗಳು ಬೆಂಕಿ ಇಟ್ಟಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ದೋಷಿಗಳೆಂದು    ನ್ಯಾಯಾಧೀಶ ಪ್ರಕಾಶ ಖಂಡೇರಿಯವರು ತೀರ್ಪು ನೀಡಿದ್ದಾರೆ. ಪ್ರಾಸಿಕ್ಯೂಷನ್ ಪರ ಪ್ರಕಾಶಶ್ಚಂದ್ರ ಶೆಟ್ಟಿ ವಾದ ಮಂಡಿಸಿದ್ದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ