ಗಣೇಶ್ ಮತ್ತು ಮಣಿಕಂಠ ಎಂಬ ಹೆಸರಿನ ತಂದೆ-ಮಗ ವಿಚ್ಛೇದಿತ ಮಹಿಳೆಗೆ ಸರ್ಪ ದೋಷವಿದ್ದ ಕಾರಣ ಅದನ್ನು ಪರಿಹರಿಸಲು ಆಕೆಯ ಪೋಷಕರಿಂದ 40 ಸಾವಿರ ರೂ. ಪಡೆದಿದ್ದಲ್ಲದೆ, ಮಹಿಳೆಯ ಜೊತೆ ಏಕಾಂತವಾಗಿ ಮಾತನಾಡಬೇಕೆಂದು ಕರೆದುಕೊಂಡು ಹೋಗಿ ತಮ್ಮ ಜೊತೆ ಲೈಂಗಿಕತೆಗೆ ಸಹಕರಿಸುವಂತೆ ಒತ್ತಡ ಹಾಕಿದ್ದಾರೆ.
ಈ ಬಗ್ಗೆ ಮಹಿಳೆ ಬೆಂಗಳೂರಿನ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸದ್ಯ ಪೊಲೀಸರು ಕಾಮಿ ಸ್ವಾಮಿಯ ಮಗ ಮಣಿಕಂಠನನ್ನು ಬಂಧಿಸಿದ್ದಾರೆ.