ಇಂದಿನಿಂದ ಹೆಚ್ಚಾಯ್ತು ಜಿ ಎಸ್ ಟಿ ಯಾವುದರ ಮೇಲೆ ಗೊತ್ತಾ?

ಶನಿವಾರ, 1 ಜನವರಿ 2022 (21:01 IST)
ದುನಿಯಾ ದುಬಾರಿಯಾಗಲಿದ್ದು, ಇ-ಕಾಮರ್ಸ್ ಸೇವೆಗಳ ಮೇಲಿನ ಜಿಎಸ್ಟಿ ಹೊಸ ವರ್ಷದಿಂದ ಏರಿಕೆ.ಇದರೊಂದಿಗೆ ದಿನಬಳಕೆ ವಸ್ತುಗಳ ಬೆಲೆ ಕೂಡ ಏರಿಕೆಯಾಗಿದೆ.ಓಲಾ, ಉಬರ್, ಸ್ವಿಗ್ಗಿ, ಜೊಮ್ಯಾಟೋ ಸೇವೆ, ಎಲೆಕ್ಟ್ರಾನಿಕ್, ಆಟೋಮೊಬೈಲ್, ಪಾದರಕ್ಷೆ,  ಮೇಲೆ ದುಬಾರಿ ಜಿಎಸ್ಟಿ ಹಾಕಲಾಗುತ್ತದೆ.ಸರಕು ಮತ್ತು ಸೇವಾ ತೆರಿಗೆ (GST) ವ್ಯವಸ್ಥೆಯು ಜನವರಿ 1, 2022ರಿಂದ ಪ್ರಮುಖ ಬದಲಾವಣೆಗಳಿಗೆ ಒಳಗಾಗಲಿದೆ. 
 
ಇವುಗಳಲ್ಲಿ ರೆಸ್ಟೋರೆಂಟ್ ವಲಯದಲ್ಲಿ ಒದಗಿಸಲಾದ ಸಾರಿಗೆ ಮತ್ತು ಸೇವೆಗಳ ಮೇಲೆ ಇ-ಕಾಮರ್ಸ್ ಸೇವಾ ಆಪರೇಟರ್ ಗಳ ಮೇಲಿನ ತೆರಿಗೆ ಹೊಣೆಗಾರಿಕೆಯೂ ಸೇರಿದೆ. 
 
ಆಯಪ್ ಮೂಲಕ ಆಟೋ, ಕಾರ್, ಬುಕಿಂಗ್ ಮಾಡಲು ಶೇಕಡ 5 ರಷ್ಟು ಜಿಎಸ್‌ಟಿ ಪಾವತಿಸಬೇಕಿದೆ. 1000 ರೂ ಮೇಲ್ಪಟ್ಟ ಪಾದರಕ್ಷೆಗಳ ಮೇಲೆ ಶೇ. 12 ರಷ್ಟು,  ಜಿಎಸ್‌ಟಿ ಕಟ್ಟಬೇಕಿದೆ. ಹತ್ತಿಬಟ್ಟೆ ಬಿಟ್ಟು ಉಳಿದ ಬಟ್ಟೆಗಳ ಬೆಲೆ ಏರಿಕೆ ಆಗಲಿದೆ.
 
 
ತೆರಿಗೆ ಎಷ್ಟು ಹೆಚ್ಚಳ?:
 
-ಆಯಪ್‌ ಮೂಲಕ ಆಟೋ ಕಾರು ಬುಕಿಂಗ್‌ ಶೇ. 5
 
-ಸ್ವಿಗ್ಗಿ, ಜೊಮ್ಯಾಟೋದಲ್ಲಿ ಆಹಾರ ಬುಕಿಂಗ್‌ ಶೇ. 5
 
-1000ರೂ ಮೇಲ್ಪಟ್ಟ ಪಾದರಕ್ಷೆಗಳು ಶೇ. 12
 
-ರೆಡಿಮೇಡ್‌ ಸೇರಿ ಎಲ್ಲಾ ಬಟ್ಟೆಗಳು (ಕಾಟನ್‌ ಬಟ್ಟೆಬಿಟ್ಟು) ಶೇ. 12

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ