ಜನಾರ್ದನ ರೆಡ್ಡಿ ವಿರುದ್ಧ ಮುನಿಸಿಕೊಂಡ ಶ್ರೀರಾಮುಲು ಅವರ ಹೊಸ ಡಿಮ್ಯಾಂಡ್‌ ಏನು ಗೊತ್ತಾ

Sampriya

ಶುಕ್ರವಾರ, 31 ಜನವರಿ 2025 (15:29 IST)
Photo Courtesy X
ಬೆಂಗಳೂರು: ಆಪ್ತ ಸ್ನೇಹಿತನಾಗಿದ್ದ ಜನಾರ್ದನ ರೆಡ್ಡಿ ಮತ್ತು ರಾಜ್ಯ ಬಿಜೆಪಿ ನಾಯಕರ ಮೇಲೆ ಮುನಿಸಿಕೊಂಡರೋ ಶ್ರೀರಾಮುಲು ಅವರನ್ನ ಸಮಾಧಾನ ಮಾಡಲು ಪಕ್ಷದ ರಾಷ್ಟ್ರೀಯ ನಾಯಕರು ಕಸರತ್ತು ಮಾಡ್ತಿದ್ದಾರೆ. ಈ ನಡುವೆ ಶ್ರೀರಾಮುಲು ಇದೀಗ ಹೊಸ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಪಕ್ಷದ ನಾಯಕರು ಎಷ್ಟೇ ಕರೆ ಮಾಡಿ ಕರೆದರೂ ಪಕ್ಷದ ನಾಯಕರಿಂದ ಶ್ರೀರಾಮುಲು ದೂರವೇ ಉಳಿಯುತ್ತಿದ್ದಾರೆ. ಸದ್ಯ ಪಕ್ಷದಲ್ಲಿ ಯಾವುದೇ ಹುದ್ದೇ ಇಲ್ಲ, ವಿಧಾನಸಭೆ ಮತ್ತು ಲೋಕಸಭೆ ಎರಡರಲ್ಲೂ ಸೋತಿರೋ ಶ್ರೀರಾಮುಲು‌ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ ದೆಹಲಿಗೆ ಬರುವಂತೆ ಸೂಚನೆ ನೀಡಿದ ಹಿನ್ನೆಲೆ ದೆಹಲಿ ಚುನಾವಣೆ ಮುಗಿದ ಬಳಿಕ ಹೈಕಮಾಂಡ್‌ ಭೇಟಿಯಾಗಲು ಸಿದ್ಧತೆ ನಡೆಸಿದ್ದಾರೆ.

ಅಸ್ತಿತ್ವದ ಉಳಿವಿನ ಹೊರಾಟದಲ್ಲಿರುವ ಶ್ರೀರಾಮುಲು ಅವರು ರಾಜ್ಯಸಭಾ ಸದಸ್ಯತ್ವದ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಮತ್ತೊಮ್ಮೆ ಸಕ್ರಿಯರಾಗಿ ಪಕ್ಷ ಕಟ್ಟಲು, ತಮಗೆ ಸೂಕ್ತ ಸ್ಥಾನಮಾನ ಕಲ್ಪಿಸುವಂತೆ ಪಟ್ಟು ಹಿಡಿದಿದ್ದು, ಈ ಬಗ್ಗೆ ಹೈಕಮಾಂಡ್‌ ಮುಂದೆ ಪ್ರಸ್ತಾಪಿಸಲು ಸಿದ್ಧತೆ ನಡೆಸಿದ್ದಾರೆ.

ಆಂಧ್ರದ ರಾಜ್ಯಸಭೆ ಸದಸ್ಯ ವೈಎಸ್ಆರ್‌ಪಿ ಪಕ್ಷದ ವಿಜಯ ಸಾಯಿರೆಡ್ಡಿ ರಾಜೀನಾಮೆ ನೀಡಿದ್ದಾರೆ.  ಅವರ 4 ವರ್ಷದ ಅವಧಿ ಇನ್ನೂ ಬಾಕಿ ಇರೋ ಹಿನ್ನೆಲೆ ಆಂಧ್ರ ಕೋಟಾದಡಿ ರಾಜ್ಯಸಭೆ ಮಾಡುವಂತೆ ಮನವಿ ಮಾಡಲಿದ್ದಾರಂತೆ. ಈ ಬಗ್ಗೆ ಸೂಕ್ಷ್ಮವಾಗಿ ರಾಜ್ಯ ಮುಖಂಡ ಮೂಲಕ ಸಂದೇಶ ನೀಡಿರುವ ರಾಮುಲು, ದೆಹಲಿ ಭೇಟಿ ವೇಳೆ ಈ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ