ಯೋಧ ಗುರು ಕುಟುಂಬಕ್ಕೆ LIC ಮಾಡಿದ್ದೇನು ಗೊತ್ತಾ?

ಶನಿವಾರ, 16 ಫೆಬ್ರವರಿ 2019 (12:15 IST)
ಉಗ್ರರ ದಾಳಿಗೆ ಬಲಿಯಾದ ಯೋಧನ ಕುಟುಂಬಕ್ಕೆ ಎಲ್ ಐ ಸಿ ಮಾನವೀಯತೆ ಮರೆದಿದೆ.

ಮಾನವೀಯತೆ ಮೆರೆದ LIC ವಿಮೆ ಕಂಪನಿಯ ಕ್ರಮಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮೃತ ಯೋಧನ ಕುಟುಂಬಸ್ಥರಿಗೆ ವಿಮೆ ಮರಣದಾವೆಯ ಮೊತ್ತವನ್ನು LIC ತಲುಪಿಸಿದೆ. ಯಾವದೇ ದಾಖಲೆ ಕೇಳದೆ ಹಣ ನೀಡಿದೆ LIC.  

ಪಾಲಿಸಿ ನಂ 725974544 ನಲ್ಲಿ ವಿಮೆ ಮಾಡಿಸಿದ್ದರು ಯೋಧ ಗುರು. ಪುಲ್ವಾಮದಲ್ಲಿನ‌ ಉಗ್ರರ ದಾಳಿ ಮೃತಪಟ್ಟಿದ್ದ ಯೋಧ ಗುರುವಿನ ಸಾವಿನ ವಿಷಯ ತಿಳಿಯುತ್ತಿದ್ದಂತೆ ನಾಮಿನಿ ಖಾತೆಗೆ ಹಣ ವರ್ಗಾವಣೆಯನ್ನು LIC ಮಂಡ್ಯ ಬ್ರಾಂಚ್ ಮಾಡಿದೆ.

3,82,199 ರೂ ವಿಮೆ ಮರಣದಾವೆ ಮೊತ್ತವನ್ನು  LIC ನೀಡಿದೆ. ಮರಣ ಪ್ರಮಾಣ ಪತ್ರವಿಲ್ಲದೇ ಹಣ ನೀಡದ ವಿಮೆ ಕಂಪನಿ ಯೋಧನ ವಿಷಯದಲ್ಲಿ ಮಾನವೀಯತೆ ಮೆರೆದಿದೆ.  ವಿಮೆ ಕಂಪನಿ  ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ