ತಾಯಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಗೆ ಮಗ ಮಾಡಿದ್ದೇನು ಗೊತ್ತಾ?

ಗುರುವಾರ, 10 ಅಕ್ಟೋಬರ್ 2019 (11:26 IST)
ಕೋಲಾರ : ತಾಯಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಮಗ  ಕೊಲೆ ಮಾಡಿದ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆಯಲ್ಲಿ ನಡೆದಿದೆ.
ಶಂಕರ ನಾರಾಯಣ ಮೂರ್ತಿ ಕೊಲೆಯಾದ ವ್ಯಕ್ತಿ, ಸಂತೋಷ್ ಕೊಲೆ ಮಾಡಿದ ಆರೋಪಿ. ಶಂಕರ ನಾರಾಯಣ ಮೂರ್ತಿಯೊಂದಿಗೆ ಸಂತೋಷ್ ತಾಯಿ ಅಕ್ರಮ ಸಂಬಂಧ ಹೊಂದಿದ್ದ ಹಿನ್ನಲೆಯಲ್ಲಿ ಸಂತೋಷ್ ತಂದೆ ಮತ್ತು ತಾಯಿಯ ನಡುವೆ ಜಗಳ ನಡೆದಿದೆ. ಈ ವಿಚಾರ ತಿಳಿದ ಸಂತೋಷ್ ಕೋಪಗೊಂಡು ತಂದೆಯ ಜೊತೆ ಸೇರಿ ಶಂಕರ ನಾರಾಯಣ ಮೂರ್ತಿ ಕತ್ತು  ಕೊಯ್ದು ಕೊಲೆ ಮಾಡಿದ್ದಾರೆ.


ಬಂಗಾರಪೇಟೆಯ ಕಾಮಸಮುದ್ರ ಪೊಲೀಸ್ ಠಾಣೆ ಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ತಂದೆ ಮಗನನ್ನು  ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ