ಬೆಂಗಳೂರು: ಕಾಂಗ್ರಸ್ ಪಕ್ಷಕ್ಕೆ ರಾಮನಗರ ಜಿಲ್ಲೆಯ ಹೆಸರು ಬದಲಿಸುವ ಯಾವುದೇ ಹಕ್ಕಿಲ್ಲ, ಇದು ತುಘಲಕ್ ಹುಚ್ಚರ ಆಡಳಿತ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಬಿಜೆಪಿ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಮನಗರ ಜಿಲ್ಲೆಗೆ ಕಾಂಗ್ರೆಸ್‌ನವರು ಹೆಸರು ಇಟ್ಟಿಲ್ಲ. ಹೀಗಿರುವಾಗ ಅವರಿಗೆ ಅದನ್ನು ಬದಲಾಯಿಸುವ ಹಕ್ಕಿಲ್ಲ. ಕರ್ನಾಟಕದಲ್ಲಿರುವ ರಾಮ ಕೃಷ್ಣ ಎಂದಿರುವ ಊರುಗಳ ಹೆಸರನ್ನು ಬದಲಾಯಿಸುತ್ತಾರಾ ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ನವರು ಹೆಸರು ಬದಲಾಯಿಸುವ ಬದಲು ಮೊದಲು ಬೆಂಗಳೂರು ನಗರದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಲಿ. ಕಾಂಗ್ರೆಸ್‌ನವರಿಗೆ ರಾಮನ ಮೇಲೆ ದ್ವೇಷವಿದ್ದರೆ ಬೇರೆ ದಾರಿ ನೋಡಿಕೊಳ್ಳಲಿ. ರಾಮನಗರ ಜಿಲ್ಲೆಗೆ ಅದರದ್ದೇ ಆದ ಘನತೆಯಿದೆ.. ಹುಚ್ಚರಂತೆ, ತುಘಲಕ್‌ರಂತೆ ಎಲ್ಲವನ್ನೂ ಬೆಂಗಳೂರಿಗೆ ಸೇರಿಸಬಾರದು ಎಂದು ಎಚ್ಚರಿಕೆ ನೀಡಿದರು.
ಈ ಸಂಬಂಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿದ್ದೇನೆ. ಜೆಡಿಎಸ್-ಬಿಜೆಪಿಯಲ್ಲಿ ಸಮನ್ವಯದ ಕೊರತೆ ಇಲ್ಲ ಎಂದರು.