ಬೆಂಗಳೂರಿನಲ್ಲಿ ಅ.17ರಂದು ನಾಯಿಗಳ ಹಬ್ಬ: ಈ ಆಚರಣೆಯ ವಿಶೇಷತೆ ಏನು ಗೊತ್ತಾ

Sampriya

ಭಾನುವಾರ, 13 ಅಕ್ಟೋಬರ್ 2024 (12:53 IST)
Photo Courtesy X
ಬೆಂಗಳೂರು: ಇದೇ ಅಕ್ಟೋಬರ್ 17ರಂದು  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಬೆಂಗಳೂರಿನಲ್ಲಿ ಕುಕುರ್ ತಿಹಾರ್ ಎಂದು ಕರೆಯುವ ನಾಯಿಗಳ ಹಬ್ಬವನ್ನು ಆಚರಿಸಲಿದೆ.

ಈ ವಿಶಿಷ್ಟ ಆಚರಣೆ ನಗರದಾದ್ಯಂತ ವಸತಿ ಕಲ್ಯಾಣ ಸಂಘಗಳು ಮತ್ತು ಪ್ರಾಣಿ ಪಾಲಕರನ್ನು ಒಟ್ಟಿಗೆ ಸೇರಿಸುತ್ತದೆ. ಮನುಷ್ಯರು ಮತ್ತು ಪ್ರಾಣಿಗಳ ನಡುವಿನ ಪ್ರೀತಿ ಮತ್ತು ಬಂಧವನ್ನು ಎತ್ತಿ ತೋರಿಸುವ ಕಾರ್ಯಕ್ರಮ ಇದಾಗಿರುತ್ತದೆ.

ಅದೇ ದಿನ ಬಿಬಿಎಂಪಿಯು ನಾಲ್ಕು ವಾರ್ಡ್‌ಗಳಿಂದ ಪೌರಕಾರ್ಮಿಕರನ್ನು ನೇಮಿಸುವ ಮೂಲಕ ಪ್ರಾಯೋಗಿಕ ಫೀಡಿಂಗ್ ಉಪಕ್ರಮವನ್ನು ಪ್ರಾರಂಭಿಸುತ್ತದೆ. ಪ್ರದೇಶದ ರೆಸ್ಟೋರೆಂಟ್‌ಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ಸಮುದಾಯ ನಾಯಿಗಳಿಗೆ ಆಹಾರ ನೀಡಲು ಸಹಾಯ ಮಾಡುತ್ತದೆ.

ಪ್ರಾಣಿಗಳ ಜನನ ನಿಯಂತ್ರಣ ಮತ್ತು ವ್ಯಾಕ್ಸಿನೇಷನ್‌ಗಳ ಹೊರತಾಗಿ, ಪ್ರಾಣಿಗಳ ನಡವಳಿಕೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಪ್ರಕೃತಿಯು ಅವುಗಳನ್ನು ಸೃಷ್ಟಿಸಿದ ರೀತಿಯಲ್ಲಿ ಅವುಗಳನ್ನು ಸ್ವೀಕರಿಸುವುದು ನಿರ್ಣಾಯಕವಾಗಿದೆ. ಅದೇ ಈ ಆಚರಣೆಯ ವಿಶೇಷ ಎಂದು ಬಿಬಿಎಂಪಿ ಆರೋಗ್ಯ ಇಲಾಖೆಯ ವಿಶೇಷ ಆಯುಕ್ತ ಸುರಲ್ಕರ್ ವಿಕಾಸ್ ಕಿಶೋರ್ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ