ಹುಬ್ಬಳ್ಳಿ ಕೇಸ್ ವಾಪಾಸ್ ಪಡೆಯುವುದು ಸರ್ಕಾರದ ಸಂಘಟಿತ ಅಪರಾಧ: ಛಲವಾದಿ ನಾರಾಯಣಸ್ವಾಮಿ

Sampriya

ಶನಿವಾರ, 12 ಅಕ್ಟೋಬರ್ 2024 (18:40 IST)
Photo Courtesy X
ಬೆಂಗಳೂರು: ಕೆಟ್ಟವರ ಸಂಹಾರ ಆಗಬೇಕು ನಿಜ. ಆದರೆ ಚಾಮುಂಡೇಶ್ವರಿ ಚಿತ್ರ ಬಳಕೆ ಮಾಡಿ ಸರ್ಕಾರದ ಜಾಹೀರಾತು ಕೊಟ್ಟಿದ್ದು ತಪ್ಪು ಎಂದು ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ದುಷ್ಟ ಶಕ್ತಿಗಳು ರಾಜ್ಯಕ್ಕೆ ಯಾರು ಅಂದರೆ ಅದು ಸಿದ್ದರಾಮಯ್ಯ .  ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ, ಗಲಭೆ ಮಾಡಿದವರು ಹಾಗೂ ಕ್ರಿಮಿನಲ್‌ಗಳ ಮೇಲೆ ಸರ್ಕಾರ ಕೇಸ್ ದಾಖಲು ಮಾಡಿತ್ತು. ಇದೀಗ ಒಂದು ಸಮುದಾಯದ ಓಲೈಕೆಗೆ ಮುಂದಾಗಿರುವ ಸರ್ಕಾರ ಅಕ್ಷಮ್ಯ ಅಪರಾಧ ಮಾಡುತ್ತಿದೆ ಎಂದರು.

ಹುಬ್ಬಳ್ಳಿಯಲ್ಲಿ ಸಂಘಟಿತ ಅಪರಾಧ ಮಾಡಿರೋ ಕೇಸ್ ವಾಪಸ್ ಪಡೆದಿರೋದು ಕೂಡ ಸರ್ಕಾರದ ಸಂಘಟಿತ ಅಪರಾಧವೇ ಆಗಿದೆ. ಹೀಗಾಗಿ ಇದನ್ನು ನಾವು ಸುಮ್ಮನೆ ಬಿಡುವುದಿಲ್ಲ. ಇದರ ಬಗ್ಗೆ ಜನರಿಗೆ ತಿಳಿಸಲು ಹೋರಾಟ ಮಾಡುತ್ತೇವೆ. ನಾವು ಕೋರ್ಟ್‌ನಲ್ಲಿ ಆಕ್ಷೇಪಣೆ ಅರ್ಜಿ ಹಾಕುತ್ತೇವೆ ಎಂದು ಆಕ್ರೊಶ ವ್ಯಕ್ತಪಡಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ